ದಾವಣಗೆರೆ: ಹರಿಹರ ನಗರಸಭೆ ವ್ಯಾಪ್ತಿಯ ನಿವೇಶನಗಳು, ಕಟ್ಟಡಗಳು ಭೂಪರಿವರ್ತನೆಯಾಗದೆ ಉಪವಿಭಜನೆ ಮಾಡಿ ಮಾರಾಟವಾಗಿ ನೋಂದಣೆಯಾಗಿರುವ ಆಸ್ತಿಗಳಿಗೆ ಇ-ಆಸ್ತಿ ತಂತ್ರಾಂಶದಿಂದ 2ಎ ನಮೂನೆ ಪತ್ರವನ್ನು ಫೆಬ್ರವರಿ 25 ರೊಳಗೆ ಅರ್ಜಿ ಸಲ್ಲಿಸಿ ತಿದ್ದುಪಡೆ ಮಾಡಿಕೊಳ್ಳಬಹುದು.
ದಾವಣಗೆರೆ: ಮಾ. 1ರಿಂದ ದ್ವಿತೀಯ ಪಿಯುಸಿ ಪರೀಕ್ಷೆ; ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲು ಸೂಚನೆ
ಎ ಮತ್ತು ಬಿ ನೋಂದಾಯಿತ ದಾಖಲಾತಿ ಆಸ್ತಿಗಳಿಗೆ ಹಕ್ಕು ಪತ್ರ, ದಾನಪತ್ರ, ಸರ್ಕಾರದ ನಿಗಮ ಮಂಡಳಿಯ ಪತ್ರ, ಪ್ರಾಧಿಕಾರ ಪತ್ರ, ಋಣಭಾರ ಪತ್ರ, ತೆರಿಗೆ ಪಾವತಿ ರಸೀದಿ, ಮಾಲೀಕರ ಫೋಟೋ, ಗುರುತಿನ ಚೀಟಿ ನೀಡಿ ಇ-ಖಾತಾ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ http://eaasthikanaja.karnatakasmartcity.in/kmf24 ಅಥವಾ ಸಹಾಯವಾಣಿ ಸಂಖ್ಯೆ 9972257264 ಕರೆ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ಹರಿಹರ ನಗರಸಭೆಯ ಪೌರಾಯುಕ್ತರು ತಿಳಿಸಿದ್ದಾರೆ.



