ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ಉಕ್ಕಡಗಾತ್ರಿ ಶ್ರೀ ಕರಿಬಸವೇಶ್ವರ ಸ್ವಾಮಿಗೆ ಕಾಣಿಕೆ ರೂಪದಲ್ಲಿ ಬಂದ 25 ಕೆ.ಜಿ. ತೂಕದ ನೂತನ ಬೆಳ್ಳಿ ಮಂಟವನ್ನು ಲೋಕಾರ್ಪಣೆಗೊಳಿಸಲಾಯಿತು.
ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಉತ್ತರಾಯಣ ಪುಣ್ಯಕಾಲದಲ್ಲಿ ಅಜ್ಜಯ್ಯನಿಗೆ ಭಕ್ತರಿಂದ ಕಾಣಿಕೆಯಾಗಿ ಬಂದ 25
ಕೆ.ಜಿ. ತೂಕದ ನೂತನ ಬೆಳ್ಳಿ ಮಂಟವನ್ನು ಅಪಾರ
ಭಕ್ತರ ಸಮ್ಮುಖದಲ್ಲಿ ದೇವಸ್ಥಾನದ ಟ್ರಸ್ಟಿಗಳು
ಲೋಕಾರ್ಪಣೆಗೊಳಿಸಿದರು. ನಂದಿಗುಡಿಯ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಬೆಳಗ್ಗೆ ಅಜ್ಜಯ್ಯನ ದೇವಸ್ಥಾನಕ್ಕೆ ತೆರಳಿ ಅಜ್ಜಯ್ಯನ ಗದ್ದಿಗೆಗೆ ಮತ್ತು ಬೆಳ್ಳಿ ಮಂಟಪಕ್ಕೆ ಪೂಜೆ ಸಲ್ಲಿಸಿದರು. ಸಂಕ್ರಾಂತಿ ಹಬ್ಬದ ಪ್ರಯುಕ್ತ ನಾಡಿನ ವಿವಿಧ ಕಡೆಯಿಂದ ಆಗಮಿಸಿದ್ದ ಭಕ್ತರು ಮಂಟದಲ್ಲಿದ್ದ ಅಜ್ಜಯನ ದರ್ಶನ ಪಡೆದು, ತುಂಗಾಭದ್ರಾ ನದಿದಂಡೆಯಲ್ಲಿ ಸಂಕ್ರಾಂತಿ ಹಬ್ಬ ಸಂಭ್ರಮಿಸಿದರು.