ದಾವಣಗೆರೆ; ಜಿಲ್ಲೆಯ ಹರಿಹರ ನಗರದ ಹಸುವಿನವೊಂದರ ಹೊಟ್ಟೆಯಲ್ಲಿ 25 ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಪತ್ತೆಯಾಗಿದೆ. ಪ್ಲಾಸ್ಟಿಕ್ ಸೇವಿಸಿ ಅಸ್ವಸ್ಥಗೊಂಡಿದ್ದ ಹಸುವೊಂದನ್ನು ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ ಪ್ರಾಣ ಉಳಿಸಿದ ಘಟನೆ ಹರಿಹರದ ಕಾಳಿದಾಸ ನಗರದಲ್ಲಿ ನಡೆದಿದೆ.
ಹರಿಹರ ನಗರದ ಕೊಪ್ಪೆಲೂರು ತಿಪ್ಪೇಶ್ ಎಂಬುವವರಿಗೆ ಸೇರಿದ ಹಸುವೊಂದು ಕಳೆದ 15 ದಿನದಿಂದ ಮೇವು ತಿನ್ನದೇ ಅನಾರೋಗ್ಯಕ್ಕೆ ಒಳಗಾಗಿತ್ತು.ಪ್ರತಿ ದಿನ ಪಶು ಆಸ್ಪತ್ರೆಗೆ ಹಸು ಕರೆತಂದು ಪರೀಕ್ಷೆ ನಡೆಸಿದರು ಹಸುವಿನ
ಹೊಟ್ಟೆ ಉಬ್ಬರ ಕಡಿಮೆಯಾಗದಕ್ಕೆ ಗಮನಿಸಿದ ವೈದ್ಯರು ಹಸು ಪ್ಲಾಸ್ಟಿಕ್ ತಿಂದಿರಬಹುದು ಎಂದು ಶಸ್ತ್ರಚಿಕಿತ್ಸೆಗೆ ಒಳಪಡಿಸಿದಾಗ ಪ್ಲಾಸ್ಟಿಕ್ ತ್ಯಾಜ್ಯ ಪತ್ತೆಯಾಗಿದೆ.
ಶಸ್ತ್ರ ಚಿಕಿತ್ಸೆಯಲ್ಲಿ ಡಾ.ತಿಪ್ಪೇಸ್ವಾಮಿ, ಭಾನುವಳ್ಳಿ ಡಾ.ಡಾ.ನಾಗಪ್ಪ ಸುಮಂತ್ ಕುಮಾರ್, ಡಾ.ಶ್ರೀದೇವಿ, ಡಾ.ಯೋಗೇಶ್, ಡಾ.ಸೈಯದ್, ಸಿಬ್ಬಂದಿ ಎ.ಕೆ ಡಿ.ಟಿ.ಮಂಜಪ್ಪ, ಶ್ವೇತಾ, ಬಸವನಗೌಡ, ಕಿರಣ್, ವೀರೇಶ್ ,ಭೂಮೇಶ್, ಪದ್ಮಾವತಿ ಭಾಗಿಯಾಗಿದ್ದರು.ಸತತ ಮೂರು ಗಂಟೆ ಕಾಲ ಎಂಟು ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ ಹಸುವಿನ ಹೊಟ್ಟೆಯಲ್ಲಿದ್ದ 25 ಕೆಜಿ ಪ್ಲಾಸ್ಟಿಕ್ ಹೊರತೆಗೆದಿದ್ದಾರೆ. ಶಸ್ತ್ರ ಚಿಕಿತ್ಸೆ ಬಳಿಕ ಎಂದಿನಂತೆ ಮೇವು, ನೀರು ಸೇವಿಸುವ ಮೂಲಕ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.
ಈ ಬಗ್ಗೆ ಮಾತನಾಡಿದ ವೈದ್ಯರು, ಪ್ಲಾಸ್ಟಿಕ್ ವಸ್ತ್ರಗಳನ್ನು ಎಲ್ಲೆಂದರಲ್ಲಿ ಜನರು ಬಿಸಾಡುತ್ತಿದ್ದಾರೆ. ಇದನ್ನು ಜಾನುವಾರುಗಳು ಸೇವಿಸುವುದರಿಂದ ಪ್ರಾಣಾಪಾಯ ಸಂಭವಿಸುತ್ತದೆ ಎಂದರು.ಪಶುಪಾಲನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಕೆ.ಟಿ.ಸಿದ್ದೇಶ್, ಜನರು ಜಾಗೃತರಾಗಿ ತಾವು ಬಳಸಿದ ಪ್ಲಾಸ್ಟಿಕ್, ನಿರುಪಯುಕ್ತ ವಸ್ತುಗಳ ಎಲ್ಲೆಂದರಲ್ಲಿ ಬಿಸಾಡದೆ ಕಸದಗಾಡಿಗೆ ಹಾಕಿ ಎಂದು ಮನವಿ ಮಾಡಿದರು.



