ದಾವಣಗೆರೆ: ಭದ್ರಾ ಡ್ಯಾಂ ನಿಂದ ನಾಲೆಗೆ ನೀರು ಹರಿಸುವುದು ನಿಲ್ಲಿಸಿದ ಕ್ರಮ ವಿರೋಧಿಸಿ, ಭದ್ರಾ ಅಚ್ಚುಕಟ್ಟಿನ ಹರಿಹರ ತಾಲ್ಲೂಕಿನ ಮಲೇಬೆನ್ನೂರು ನೀರಾವರಿ ಇಲಾಖೆ ಎದುರು ರೈತರು ಹರಿಹರ ಶಾಸಕ ಬಿ.ಪಿ. ಹರೀಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ರಸ್ತೆ ತಡೆದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಶಾಸಕ ಬಿ.ಪಿ. ಹರೀಶ್ , ನೀರಾವರಿ ಇಲಾಖೆ ಸಚಿವರು,ಬೆಂಗಳೂರಿಗೆ ದಾವಣಗೆರೆ, ಶಿವಮೊಗ್ಗ ಶಾಸಕರು, ಸಚಿವರನ್ನು ಕರೆಸಿ , ಭದ್ರಾ ಅಚ್ಚುಕಟ್ಟಿನ ರೈತರ ಸಮಸ್ಯೆ ಆಲಿಸಲಿಲ್ಲ. ಅಧಿಕಾರಿಗಳಿಂದ ಮಾಹಿತಿ ಪಡೆಯದೇ 10 ನಿಮಿಷದಲ್ಲಿ ಸಭೆ ಮುಗಿಸಿದರು. ಎಂಜಿನಿಯರುಗಳ ಸಲಹೆ ಪಡೆಯಲಿಲ್ಲ, ಕಾಟಾಚಾರದ ಸಭೆ ನಡೆಸಿ ದೆಹಲಿಗೆ ತೆರಳಿದರು.
ಭದ್ರಾ ಅಚ್ವುಕಟ್ಟು ಮೇಲ್ಭಾಗದಲ್ಲಿ ಅಕ್ರಮ ಪಂಪ್ ಸೆಟ್ ಅಳವಡಿಸಿಕೊಂಡಿದ್ದಾರೆ.ಕೊನೆಯ ಭಾಗದ ರೈತರು ನೀರಿಲ್ಲದೆ, ಬೀದಿಗೆ ಬಿದ್ದಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಭತ್ತ ನಾಟಿ ಮಾಡಿದ ಬೆಳೆ ನೀರಿಲ್ಲದೆ ಒಣಗುತ್ತಿದೆ. ಇದಕ್ಕೆ ನೀರಾವರಿ ಇಲಾಖೆ ಸಚಿವರು,ಕಾಡಾ ಮುಖ್ಯಸ್ಥರು, ಸಚಿವ ಮಧು ಬಂಗಾರಪ್ಪ ಕಾರಣ ಎಂದು ಕಿಡಿಕಾರಿದರು. ಗುರುವಾರದಿಂದ ಇನ್ನಷ್ಟು ಉಗ್ರ ಹೋರಾಟ ನಡೆಸಲಾಗುವುದು ಎಂದರು.
ದಾವಣಗೆರೆ: ಹೊಸ ರಾಶಿ ಅಡಿಕೆ 1, 200 ರೂ. ಏರಿಕೆ; ಹಳೆಯ ಅಡಿಕೆ 2 ಸಾವಿರ ಕುಸಿತ..!



