ಹರಪನಹಳ್ಳಿ: ಮಿನಿ ಕುಕ್ಕೆ ಸುಬ್ರಹ್ಮಣ್ಯ ಎಂದು ಖ್ಯಾತಿ ಪಡೆದಿರುವ ಸತ್ತೂರು-ಗೊಲ್ಲರಹಟ್ಟಿಯ ಶ್ರೀ ಜುಂಜೇಶ್ವರ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಇಂದು ಬೆಳೆಗ್ಗೆ ಊರಿನ ಗ್ರಾಮಸ್ಥರು, ಕಂದಾಯ ಇಲಾಖೆ, ಗ್ರಾಮಲೆಕ್ಕಧಿಕಾರಿ ಸಮ್ಮುಖದಲ್ಲಿ ನಡೆಯಿತು.
ಈ ದೇವಸ್ಥಾನ ಮುಜುರಾಯಿ ಇಲಾಖೆ ವ್ಯಾಪ್ತಿಯಲ್ಲಿದ್ದು, ಗ್ರಾಮಸ್ಥರೆ ಆಡಳಿತ ಮಂಡಳಿಯ ಮೂಲಕ ದೇವಸ್ಥಾನವನ್ನು ಮುನ್ನಡೆಸುತ್ತಿದ್ದಾರೆ. ಶ್ರಾವಣ ಮಾಸದಲ್ಲಿ ತಹಶೀಲ್ದಾರ್ ನಂದೀಶ್ ನೇತೃತ್ವದಲ್ಲಿ ಮುಜುರಾಯಿ ಇಲಾಖೆ ವ್ಯಾಪ್ತಿಗೆ ಈ ದೇವಸ್ಥಾನವನ್ನು ಅಧಿಕೃತವಾಗಿ ತಗೆದುಕೊಂಡು ಆಡಳಿತಧಿಕಾರಿಯಾಗಿ ಅರಸೀಕೆರೆ ಕಂದಾಯ ನಿರೀಕ್ಷಕ ಶ್ರೀ ಧರ್ ರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.
ಇದೇ ಮೊದಲ ಬಾರಿ ಹುಂಡಿ ಎಣಿಕೆಯಾಗಿದ್ದು ಹುಂಡಿಯಲ್ಲಿ 73,266 ರೂ ಹಣ ಸಂಗ್ರಹವಾಗಿದೆ. ಈ ಹಣವನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಂಗ್ರಿಹಳ್ಳಿಯ ದೇವಸ್ಥಾನದ ಖಾತೆಗೆ ಜಮಾ ಮಾಡಲಾಗಿದೆ ಎಂದು ಆಡಳಿತಧಿಕಾರಿ ಶ್ರೀಧರ್ ತಿಳಿಸಿದರು. ವಿಷ ಜಂತುಗಳು ಕಡಿದಾಗ ಗ್ರಾಮಕ್ಕೆ ಬಂದು ಜುಂಜೇಶ್ವರನ ದರ್ಶನಕ್ಕೆ ಪಡೆದರೆ ಒಳ್ಳೆಯದು ಎನ್ನುವುದು ಇಲ್ಲಿನ ಭಕ್ತರ ನಂಬಿಕೆಯಾಗಿದೆ.
ಈ ಸಂದರ್ಭದಲ್ಲಿ ಶ್ರೀ ಉತ್ಸವಾಂಭ ದೇವಸ್ಥಾನದ ಗುಮಾಸ್ತ ರಮೇಶ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಮ್ಯಾನೇಜರ್ ಪ್ರವೀಣ್ ಕುಮಾರ್, ಗ್ರಾಮ ಲೆಕ್ಕಾಧಿಗಳಾದ ಮಂಜುನಾಥ್, ಶ್ರೀಕಾಂತ್, ರವಿಕುಮಾರ್, ನಾನ್ಯಾ ಸಬ್, ಪೊಲೀಸ ಇಲಾಖೆ ಮಂಜುನಾಥ್, ಗೃಹ ರಕ್ಷಕ ದಳದ ಗೋವಿಂದರಾಜ ಹಾಗೂ ಮುಜುರಾಯಿ ಇಲಾಖೆ, ಕಂದಾಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.



