ದಾವಣಗೆರೆ: ದನಕರುಗಳ ಮೇವಿಗಾಗಿ ಸಂಗ್ರಹಿಸಿದ್ದ 20 ಸಾವಿರ ಮೌಲ್ಯದ ಹುಲ್ಲಿನ ಬಣವೆಗೆ ಬೆಂಕಿ ಬಿದ್ದಿದ್ದು, ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಜಿಲ್ಲಾಯ ಹೊನ್ನಾಳಿ ತಾಲ್ಲೂಕಿನ ಆನವೇರಿ ಗ್ರಾಮದಲ್ಲಿ ನಡೆದಿದೆ.
ಆನವೇರಿ ನರಸಿಂಹಪ್ಪ ಕಣದಲ್ಲಿನ ಬಣವೆಗೆ ಭಾನುವಾರ ಬೆಂಕಿ ತಗುಲಿದೆ. ಇದರಿಂದ ಸುಟ್ಟು ಭಸ್ಮವಾಗಿದೆ. ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ 80 ಪೆಂಡೆಯಲ್ಲಿದ್ದ ಹುಲ್ಲಿನ ಬಣವೆಗೆ ಬೆಂಕಿ ಬಿದ್ದಿದೆ.
ಬೆಂಕಿ ಜ್ವಾಲೆಗೆ ಇಡೀ ಬಣವೆ ಸುಟ್ಟು ಬೂದಿಯಾಗಿದೆ. ಒಟ್ಟು 20,000 ಮೌಲ್ಯದ ಹುಲ್ಲು ಸುಟ್ಟು ನಷ್ಟವಾಗಿದೆ.



