ದಾವಣಗೆರೆ: ಜಿಲ್ಲಾ ಪೊಲೀಸ್ ವತಿಯಿಂದ ಹಾಫ್ ಹೆಲ್ಮೆಟ್ (half helmet) ತೆರವು ವಿಶೇಷ ಕಾರ್ಯಾಚರಣೆ ನಡೆಸಲಾಗಿದ್ದು, 2 ಸಾವಿರ ಹಾಫ್ ಹೆಲ್ಮೆಟ್ ವಶಕ್ಕೆ ಪಡೆಯಲಾಗಿದೆ. ಸೋಮವಾರದಿಂದ ದಂಡ ವಿಧಿಸುವ ಎಚ್ಚರಿಕೆ ನೀಡಲಾಗಿದೆ.
ದಾವಣಗೆರೆ: ಬೈಕ್ ವ್ಹಿಲಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಯುವಕರ ಮೇಲೆ ಬಿತ್ತು ಕೇಸ್
ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಸೂಚನೆಯಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ ಸಂತೋಷ್ & ಜಿ ಮಂಜುನಾಥ ಹಾಗೂ ನಗರ ಡಿವೈಎಸ್ಪಿ ಶರಣ ಬಸವೇಶ್ವರ ಮಾರ್ಗದರ್ಶನದಲ್ಲಿ
ದಾವಣಗೆರೆ ನಗರ ಸಂಚಾರ ಪೊಲೀಸ್ ಸಿಪಿಐ ನಲವಾಗಲು ಮಂಜುನಾಥ್ ರವರ ನೇತೃತ್ವದಲ್ಲಿ ಫೆ.21,22 ರಂದು ಜಾಗೃತಿ ಮೂಡಿಸಲಾಯಿತು.
ದಾವಣಗೆರೆ: ಖಾಸಗಿ ಹೋಟೆಲ್ ನಲ್ಲಿ ಇಸ್ಫೀಟ್ ಜೂಜಾಟದ ಮೇಲೆ ದಾಳಿ; 26 ಜನ ಬಂಧನ- 24.86 ಲಕ್ಷ ನಗದು ವಶ
ನಗರದ ಅರುಣಾ, ಸಂಗೊಳ್ಳಿ ರಾಯಣ್ಣ, ಎಸಿ ವೃತ್ತ, ಎಂ ಜಿ ವೃತ್ತ, ಗಡಿಯಾರ ಕಂಬ ವೃತ್ತಗಳಲ್ಲಿ ಹಾಫ್ ಹೆಲ್ಮೆಟ್, ಕಳಪೆ ಗುಣಮಟ್ಟದ ಹೆಲ್ಮೆಟ್ ಮತ್ತು ಪ್ಲಾಸ್ಟಿಕ್ ಹೆಲ್ಮೆಟ್ ಹಾಕಿಕೊಂಡು ಸಂಚಾರಿಸುವ ಬೈಕ್ ಸವಾರರಿಂದ ಸುಮಾರು 2000 ಪ್ಲಾಸ್ಟಿಕ್ ಹಾಫ್ ಹೆಲ್ಮೆಟ್ ಗಳನ್ನು ನಾಶಪಡಿಸುವ ಸಲುವಾಗಿ ವಶಕ್ಕೆ ಪಡೆಯಲಾಯಿತು. ಈ ಬಾರಿ ISI ಮಾರ್ಕ್ ಇರುವ ಗುಣಮಟ್ಟದ ಹೆಲ್ಮೆಟ್ ತಂದು ಹಾಕಿಕೊಂಡವರಿಗೆ ಹಾಗೂ ಪ್ಲಾಸ್ಟಿಕ್ ಹೆಲ್ಮೆಟ್ / half ಹೆಲ್ಮೆಟ್ ಅನ್ನು ಅರಿತುಕೊಂಡು ವಶಕ್ಕೆ ನೀಡಿದವರಿಗೆ ಮಾತ್ರ ದಂಡ ವಿಧಿಸದೆ ತಿಳುವಳಿಕೆ ನೀಡಿ ಹಾಗೆ ಕಳುಹಿಸಲಾಯಿ.
ಈ ವಿಶೇಷ ಕಾರ್ಯಚರಣೆಯು ದಿನಾಂಕ 23/2/25 ರವರೆಗೆ ನಡೆಯಲಿದ್ದು, ಮುಂದೆ ದಿನಾಂಕ 24/2/25 ರ ಸೋಮವಾರ ದಿಂದ ISI ಮಾರ್ಕ್ ಇಲ್ಲದ ಕಳಪೆ, ಹಾಫ್ ಮತ್ತು ಪ್ಲಾಸ್ಟಿಕ್ ಹೆಲ್ಮೆಟ್ ಹಾಕಿಕೊಂಡು ಮೋಟಾರ್ ಸೈಕಲ್ ಓಡಿಸುವ ಚಾಲಕರಿಗೆ ಕಡ್ಡಾಯವಾಗಿ ದಂಡ ವಿಧಿಸಲಾಗುವುದು ಎಂದು ಪೊಲೀಸ್ ಅಧಿಕ್ಷರವರು ಎಚ್ಚರಿಸಿದ್ದಾರೆ