Connect with us

Dvgsuddi Kannada | online news portal | Kannada news online

ದಾವಣಗೆರೆ: ಐಟಿಐ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; HAL ನಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

ದಾವಣಗೆರೆ

ದಾವಣಗೆರೆ: ಐಟಿಐ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; HAL ನಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

ದಾವಣಗೆರೆ: ಹೆಚ್.ಎ.ಎಲ್ ಬೆಂಗಳೂರಲ್ಲಿ ಐ.ಟಿ.ಐ (ಫಿಟ್ಟರ್, ಟರ್ನರ್, ಮೆಷಿನಿಸ್ಟ್, ಎಲೆಕ್ಟ್ರೀಷಿಯನ್, ವೆಲ್ಡರ್, ಕೋಫಾ, ಫೌಂಡ್ರಿಮನ್ & ಶೀಟ್ ಮೆಟಲ್ ವರ್ಕರ್) ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಂದ ಅಪ್ರೆಂಟೀಸ್ ತರಬೇತಿಗಾಗಿ ಅರ್ಜಿ ಆಹ್ವಾನಿಸಿದ್ದಾರೆ.

ಅರ್ಜಿ ನಮೂನೆಯನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಪಡೆದುಕೊಂಡು, ಭರ್ತಿ ಮಾಡಿದ ಅರ್ಜಿಯನ್ನು ಏ.27 ರ ಸಂಜೆ 05 ಗಂಟೆಯೊಳಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಡಳಿತ ಭವನ, 1ನೇ ಮಹಡಿ, ಬಿ-ಬ್ಲಾಕ್, ಪಿ.ಬಿ. ರಸ್ತೆ, ದಾವಣಗೆರೆ ಇಲ್ಲಿಗೆ ಸಲ್ಲಿಸಬೇಕು. ಅಭ್ಯರ್ಥಿಗಳು apprenticeshipindia.org/ candidate-registration ಈ ವೆಬ್‍ಸೈಟ್‍ನಲ್ಲಿ ನೋಂದಾಯಿಸಿ, ಕಡ್ಡಾಯವಾಗಿ ನೋಂದಣಿ ಸಂಖ್ಯೆಯನ್ನು ತರತಕ್ಕದ್ದು.  ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಡಳಿತ ಭವನ, ದಾವಣಗೆರೆ ದೂರವಾಣಿ ಸಂಖ್ಯೆ:08192-259446 ಇವರನ್ನು ಸಂಪರ್ಕಿಸಬಹುದುದೆಂದು ಜಿಲ್ಲಾ ಉದ್ಯೋಗಾಧಿಕಾರಿ ಗಿರೀಶ.ಕೆ.ಎನ್ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top