ಹರಿಹರ:ತಾಲೂಕಿನ ಗುತ್ತೂರು ಗ್ರಾಮ ಪಂಚಾಯಿತಿಯನ್ನು ಹರಿಹರ ನಗರಸಭೆ ಸೇರ್ಪಡೆಗೆ ಗ್ರಾಮಸ್ಥರು, ಜನಪ್ರತಿನಿಧಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆದೇಶ ವಿರೋಧಿಸಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಗ್ರಾಮದ ಆಂಜನೇಯ ದೇವಸ್ಥಾನದ ಆವರಣದಲ್ಲಿ ಗ್ರಾಮದ ಮುಖಂಡರುಗಳು , ಜನಪ್ರತಿನಿಧಿಗಳು ನೇತೃತ್ವದಲ್ಲಿ ಶುಕ್ರವಾರದಂದು ಸಭೆ ಸೇರಿ ಗುತ್ತೂರು ಗ್ರಾಮವನ್ನು ಹರಿಹರ ನಗರಸಭೆ ಸೇರ್ಪಡೆ ವಿರೋಧಿಸಲು ತೀರ್ಮಾನಿಸಿದರು.
ಯಾವುದೋ ಕಾಲದಲ್ಲಿ ಯಾರದೋ ಒಪ್ಪಿಗೆ ಪಡೆದು ಈಗ ನಮ್ಮ ಕಾಲದಲ್ಲಿ ಈ ರೀತಿ ಸೇರ್ಪಡೆ ಮಾಡಿರುವುದು ಸರಿಯಾದ ಕ್ರಮವಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ, ಸರಿಪಡಿಸಬೇಕು, ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮಸ್ಥರು ಉಗ್ರವಾದ ಹೋರಾಟ ನಡೆಸಲಾಗುವುದು ಎಂದರು.
ಇತ್ತೀಚೆಗೆ ರಾಜ್ಯ ಸರ್ಕಾರವು ಗ್ರಾಮ ಪಂಚಾ ಯಿತಿ ಚುನಾವಣೆಗಳಿಗೆ ಸಿದ್ಧತೆ ನಡೆಸಿದ್ದು, ಅದರಲ್ಲಿ ನಮ್ಮ ತಾಲೂಕಿನ ಪಟ್ಟಿಯಲ್ಲಿ ನಮ್ಮ ಗ್ರಾಮದ ಹೆಸರು ಸಹ ನಮೂದಿಸಲಾಗಿದ್ದು ಮೀಸಲಾತಿ ಪಟ್ಟಿಯನ್ನು ಸಹ ಹೊರಡಿಸಿರುತ್ತದೆ. ಕೆಲವೇ ದಿನ ಗಳಲ್ಲಿ ಪಂಚಾಯ್ತಿ ಚುನಾವಣೆಗಳು ನಡೆಯುವ ಇಂತಹ ಸಂದರ್ಭದಲ್ಲಿ ನಮ್ಮ ಗ್ರಾಮವನ್ನು ನಗರ ಸಭೆಗೆ ಸೇರ್ಪಡೆ ಮಾಡಿರುವುದು ನಮ್ಮ ಗ್ರಾಮಕ್ಕೆ ಮಾಡಿದ ಅನ್ಯಾಯವಾಗಿರುವುದಾಗಿ ತಿಳಿಸಿದರು.
ನಗರಸಭೆ ವ್ಯಾಪ್ತಿಗೆ ನಮ್ಮ ಗ್ರಾಮವನ್ನು ಸೇರಿಸುವುದು ಬೇಡ ಎಂದು ಜಿಲ್ಲಾಧಿಕಾರಿಗಳ ಗಮನವನ್ನು ಸೆಳೆದರು ಸಹ ಯಾವುದೇ ಪ್ರಯೋಜನವಾಗುವುದಿಲ್ಲ. ಸದ್ಯದಲ್ಲಿಯೇ ಗ್ರಾಮದ ಮುಖಂಡರು ಹಿರಿ ಯರು ಸೇರಿದಂತೆ ಹಲವು ಸಂಘ-ಸಂಸ್ಥೆಗಳ ಪದಾ ಧಿಕಾರಿಗಳು ಸದಸ್ಯರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಗುತ್ತೂರು ಗ್ರಾಮವನ್ನು ಹರಿಹರ ನಗರಸಭೆಯಿಂದ ಬೇರ್ಪಡಿಸಿ ಸ್ವತಂತ್ರವಾಗಿ ನಮ್ಮ ಗ್ರಾಮ ಪಂಚಾಯಿ ನಡೆಯುವಂತೆ ಕಂದಾಯ ಸಚಿವರು ಹಾಗೂ ಮುಖ್ಯಮಂತ್ರಿಗಳು ಪ್ರಯತ್ನ ಮಾಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಗುವುದು.
ಸಭೆಯಲ್ಲಿ ತಾಪಂ ಮಾಜಿ ಉಪಾಧ್ಯಕ್ಷ ಪೈ, ಬಸಪ್ಪ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಏ.ಕೆ. ಕೊಟ್ರಪ್ಪ, ಪಿ ಎಲ್ ಡಿ ನಿರ್ದೇಶಕ ಚಂದ್ರಪ್ಪ, ಹಿರಿಯ ಮುಖಂಡರಾದ ಸಿದ್ದನ ಗೌಡ್ರು, ರೈತ ಸಂಘದ ತಾ ಲೂಕು ಅಧ್ಯಕ್ಷ ಗರಡಿಮನಿ ಬಸಣ್ಣ, ಚಿಕ್ಕ ವೀರಪ್ಪ, ಐ.ಹನುಮಂತಪ್ಪ, ಜಿ.ಎಸ್.ವೀರಭದ್ರಪ್ಪ, ಮಂಜಪ್ಪ ಸುಣಗಾರ್, ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಬಿ.ಎಂ.ಪಿ.ಹನುಮಂತಪ್ಪ, ತಾಪಂ ಮಾಜಿ ಸದಸ್ಯ ಚಲವಾದಿ ಪಕೀರಪ್ಪ, ಎಂ.ಬಿ.ಅವಿನಾಶ್ ಅಲ್ಲದೆ ಗ್ರಾಮದ ಯುವಕ ಸಂಘಗಳ, ರೈತ ಸಂಘದ ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.



