Connect with us

Dvgsuddi Kannada | online news portal | Kannada news online

ದಾವಣಗೆರೆ: GMIT ಎಂಬಿಎ ವಿದ್ಯಾರ್ಥಿಗಳಿಗೆ  ಶಿಷ್ಯವೇತನ ವಿತರಣೆ

ಪ್ರಮುಖ ಸುದ್ದಿ

ದಾವಣಗೆರೆ: GMIT ಎಂಬಿಎ ವಿದ್ಯಾರ್ಥಿಗಳಿಗೆ  ಶಿಷ್ಯವೇತನ ವಿತರಣೆ

ದಾವಣಗೆರೆ: ನಗರದ GMIT ಮಹಾವಿದ್ಯಾಲಯದಲ್ಲಿ ಎಂಬಿಎ  ಪ್ರಥಮ ವರ್ಷದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ  ಶಿಷ್ಯವೇತನ  ವಿತರಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ. ವೈ. ವಿಜಯಕುಮಾರ್ ವಹಿಸಿದ್ದರು. ಮುಖ್ಯಅಥಿತಿಯಾಗಿ ಮಹಾವಿದ್ಯಾಲಯದ ಆಡಳಿತಾಧಿಕಾರಿ ವೈ. ಯು. ಸುಭಾಶ್ಚಂದ್ರ ಉಪಸ್ಥಿತತಿದ್ದರು. .

ಪ್ರತಿವರ್ಷವೂ  ಎಂ ಬಿಎ ವಿದ್ಯಾರ್ಥಿಗಳಿಗೆ ಉಚಿತವಾಗಿ  ಪರೀಕ್ಷಾ ತರಬೇತಿಯನ್ನು ನೀಡುತ್ತದೆ. ಈ ವರ್ಷ ಸುಮಾರು 1೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿಗೆ ನೋಂದಾಯಿಸಿದ್ದರು. ತರಬೇತಿಯ ಮೂಲಕ  ಎಂ. ಬಿ.ಎ ವಿಭಾಗಕ್ಕೆ  ಸೇರಿರುವ ಅರ್ಹ 7 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಹಾವಿದ್ಯಾಲಯದ ಮುಖಾಂತರ ತಲಾ 10,000/- ರೂ ವಿತರಿಸಲಾಯಿತು.  ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆದು ಮಹಾವಿದ್ಯಾಲಕ್ಕೆ ಹೆಸರು ತರುವಂತೆ ಈ ವೇಳೆ ಹಾರೈಸಿದರು . ಈ ಸಂದರ್ಭ್ದಲ್ಲಿ ಎಂ. ಬಿ.ಎ ವಿಭಾಗದ ನಿರ್ದೇಶಕ ಪ್ರೊ. ಬಿ. ಬಕ್ಕಪ್ಪ,  ಡಾ. ಗುರುರಾಜ್ ಫಾಟಕ್,  ವಿಭಾಗದ ಮುಖ್ಯಸ್ಥ  ಡಾ. ಮಂಜುನಾಥ. ಬಿ. ಆರ್ ಇದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top