ದಾವಣಗೆರೆ: ಆರ್ಥಿಕ ಹಿಂಜರಿತ ನಡುವೆಯೂ ನಗರದ ಜಿಎಮ್ ತಾಂತ್ರಿಕ ಮಹಾವಿದ್ಯಾಲಯವು ವಿದ್ಯಾರ್ಥಿಗಳಿಗೆ ಪ್ರಸಕ್ತ ವರ್ಷದ 2023 ರ ಸಾಲಿನ 400 ಜಾಬ್ ಆಫರ್ಸ್ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ, ತಾಂತ್ರಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ, ತಾಂತ್ರಿಕ ಗುಣಮಟ್ಟ, ವರ್ತನೆ, ನಡವಳಿಕೆ ಮತ್ತು ಇತ್ತೀಚಿನ ತಂತ್ರಜ್ಞಾನಗಳ ತಿಳುವಳಿಕೆ ಆಯ್ಕೆ ಪ್ರಕ್ರಿಯೆಯಲ್ಲಿ ಮಾನದಂಡಗಳಾಗುತ್ತವೆ ಎಂದು ತಿಳಿಸಿದರು.
ಆರ್ಥಿಕ ಹಿಂಜರಿತದಿಂದ ಹಲವು ಕಂಪನಿಗಳ ಸಂದರ್ಶನ ಪ್ರಕ್ರಿಯೆಯು ವಿಳಂಬವಾಗಲಿದ್ದು ಅಥವಾ ಕಡಿಮೆ ಪ್ರಮಾಣದ ಆಯ್ಕೆಗಳು ನಡೆಯಲಿದ್ದು ವಿದ್ಯಾರ್ಥಿಗಳು ತಮ್ಮ ಜ್ಞಾನ ಮತ್ತು ಆತ್ಮವಿಶ್ವಾಸದಿಂದ ಇರುವ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆಕೊಟ್ಟರು.
ಈಗಾಗಲೇ ಎಸ್ ಎಲ್ ಕೆ ಸಾಫ್ಟ್ವೇರ್ ಸರ್ವಿಸಸ್, ಟೆಕ್ ಮಹಿಂದ್ರ, ಎಕ್ಸಾವೇರ್ ಟೆಕ್ನಾಲಜಿಸ್, ರೋಬೋ ಸಾಫ್ಟ್ ಟೆಕ್ನಾಲಜೀಸ್, ಕ್ವಾಲಿಟೆಸ್ಟ್, ಟಿಸಿಎಸ್, ವಿಲೇ ಎಡ್ಜ್, ಇಂಟೆಲಿಪಾತ್ ಸಾಫ್ಟ್ವೇರ್, ಒಡೆಸ್ಸಾ, ಮೆಡಿ ಅನಲೈಟಿಕ, ಸ್ಮಾರ್ಟ್ ಸಾಕ್ಸ್ , ಆಫ್ಟಂ, ಸ್ಕಿಲ್ ಒರಟೆಕ್ಸ್ , ಒಜಿ ಹೆಲ್ತ್ ಕೇರ್, ಮರ್ಸಿಡಸ್ ಬೆನ್ಸ್, ಐ ಬಿ ಎಂ, ಡಿ ಮಾರ್ಟ್ ಮುಂತಾದವುಗಳು ಸಂದರ್ಶನ ಪ್ರಕ್ರಿಯೆಯನ್ನು ನಡೆಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಕಂಪನಿಗಳಾದ ಸೋನಾಟಾ ಸಾಫ್ಟ್ವೇರ್, ಎಂಫಸಿಸ್, ಸ್ಮೈಡರ್ ಎಲೆಕ್ಟ್ರಿಕ್, ರಾಂಕೋ ಸಿಮೆಂಟ್ಸ್, ತಯಾನ ಸಾಫ್ಟ್ವೇರ್ಸ್, ಸಿಕ್ಸ್ ಡಿ ಟೆಕ್ನಾಲಜೀಸ್, ಕಿರ್ಲೋಸ್ಕರ್, ಮಹಿಂದ್ರ ಸಿ ಐ ಈ, ಹಿಟಾಚಿ, ಟೊಯೋಟಾ ಕಿರ್ಲೋಸ್ಕರ್ ಟೆಕ್ಸ್ಟೈಲ್, ಎಸಿಸಿ ಸಿಮೆಂಟ್ಸ್, ಎಪಿಸೋರ್ಸ್, ಒಮೆಗಾ ಹೆಲ್ತ್ ಕೇರ್, ಕೋಟಕ್ ಮಹೇಂದ್ರ ಬ್ಯಾಂಕ್, ಅಕಾರ್ಡ್ ಸಾಫ್ಟ್ವೇರ್, ಜೆ ಎಸ್ ಡಬ್ಲ್ಯೂ ಲೈಟಿಂಗ್ ಟೆಕ್ನಾಲಜೀಸ್ , ಪವರ್ ಕಂಟ್ರೋಲ್, ಪಾರ್ಕ್ ಕಂಟ್ರೋಲ್ ಕಮ್ಯುನಿಕೇಶನ್ ಅನೇಕ ಕಂಪನಿಗಳು ಸಂದರ್ಶನ ಪ್ರಕ್ರಿಯೆಯನ್ನು ನಡೆಸಲಿದ್ದು ಹಲವು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂದು ತಿಳಿಸಿದರು.