ಹರಪನಹಳ್ಳಿ: ಗಂಗಾ ಕಲ್ಯಾಣ ಯೋಜನೆಯಡಿ ಆದಿಜಾಂಬವ ನಿಗಮದಿಂದ 23, ಅಂಬೇಡ್ಕರ್ ನಿಗಮದಿಂದ 4 ಫಲಾನುಭವಿಗಳಿಗೆ 2018-19ನೇ ಸಾಲಿನ ಒಟ್ಟು 23 .5 ಲಕ್ಷ ಸಹಾಯಧನದಲ್ಲಿ ಕೊಳವೆ ಬಾವಿಯ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.
ಶಾಸಕ ಜಿ.ಕರುಣಾಕರ ರೆಡ್ಡಿ ಪಟ್ಟಣದ ಬಾಬು ಜಗಜೀವನರಾಂ ಭವನದ ಆವರಣದಲ್ಲಿ ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಕೊಳವೆ ಬಾವಿ ಸಾಮಗ್ರಿಗಳನ್ನು ವಿತರಿಸಿದರು. ನಂತರ ಮಾತನಾಡಿದ ಅವರು, ಕೊಳವೆಬಾವಿ, ಮೋಟರ್ ಪಂಪ್ ಸೆಟ್, ವಿದ್ಯುತ್ ಸಂಪರ್ಕವನ್ನು ಈ ಯೋಜನೆಯಲ್ಲಿ ಫಲಾನುಭವಿಗೆ 23.5 ಲಕ್ಷ ನೀಡಲಾಗುತ್ತಿದ್ದು, ಒಂದು ವೇಳೆ ಆಳದಲ್ಲಿ ನೀರು ದೊರೆತು ಹೆಚ್ಚಿನ ಹಣ ಖರ್ಚು ಆದಲ್ಲಿ ಫಲಾನುಭವಿಗಳಿಗೆ ನಿಗಮದಿಂದ ಸಾಲವನ್ನು ಸಹಾಯಧನ ಅಡಿಯಲ್ಲಿ ನೀಡಲಾಗುವುದು ಎಂದರು.
ಬಿಜೆಪಿ ಮುಖಂಡರಾದ ಕಣಿವಿಹಳ್ಳಿ ಮಂಜುನಾಥ, ಆರ್, ಲೋಕೇಶ್, ಎಂ. ಮಲ್ಲೇಶ್, ನಾಗರಾಜ, ಸೇರಿದಂತೆ ಇತರರು ಇದ್ದರು.