ದಾವಣಗೆರೆ: ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಹಾಡಿಗೆ ದಾವಣಗೆರೆ ತಹಶೀಲ್ದಾರ್ ಗಿರೀಶ್ ಸಖತ್ ಡ್ಯಾನ್ಸ್ ಮಾಡಿದ್ದಾರೆ. ತಾಲೂಕಿನ ತುರ್ಚಘಟ್ಟದ ನಿರಾಶ್ರಿತರ ಪರಿಹಾರ ಕೇಂದ್ರದ ಗಣಪತಿ ವಿಸರ್ಜನೆ ವೇಳೆ ನಿರಾಶ್ರಿತರ ಆತ್ಮಸ್ಥೈರ್ಯ ತುಂಬಲು ತಹಶೀಲ್ದಾರ್ ಈ ನೃತ್ಯ ಮಾಡಿದ್ದಾರೆ.
ಮೂರು ದಿನಗಳ ಕಾಲ ಪ್ರತಿಷ್ಠಾಪನೆ ಮಾಡಿದ್ದ ಗಣಪತಿ ವಿಸರ್ಜನೆ ಮಾಡಿದ್ದು, ಈ ವೇಳೆ ತಹಶೀಲ್ದಾರ್ ನಿರಾಶ್ರಿತರು, ಸಿಬ್ಬಂದಿಗಳು ಕೂಡ ನೃತ್ಯ ಮಾಡಿದ್ದಾರೆ. ನಿರಾಶ್ರಿತರೊಂದಿಗೆ ಮುಕ್ತವಾಗಿ ಬೇರೆತು ಗಣಪತಿ ಹಬ್ಬವನ್ನು ಆಚರಿಸಿದ್ದಾರೆ.
ಭಿಕ್ಷಕರು, ಅನಾಥರು ಹಾಗೂ ನಿರಾಶ್ರಿತರು ಈ ಕೇಂದ್ರದಲ್ಲಿದ್ದು, ಅವರ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಗಣಪತಿ ವಿಸರ್ಜನೆ ಹಿನ್ನೆಲೆ ಹಲವು ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ನಿರಾಶ್ರಿತರ ಜೊತೆ ಹಾಡಿಗೆ ಕುಣಿದು ತಹಶೀಲ್ದಾರ್ ಸಂಭ್ರಮಿಸಿದ್ದಾರೆ.



