ದಾವಣಗೆರೆ: ಜಾನುವಾರು ಮೇವಿಗೆಂದು ರೈತರು ಸಂಗ್ರಹಿಸಿಟ್ಟಿದ್ದ ಸುಮಾರು 2 ಲಕ್ಷಕ್ಕೂ ಅಧಿಕ ಮೌಲ್ಯದ 18 ಲೋಡ್ ಹುಲ್ಲಿನ ಬಣವೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕು ಹರೋಸಾಗರ ಗ್ರಾಮದಲ್ಲಿ ನಡೆದಿದೆ.
ಹರೋಸಾಗರ ಗ್ರಾಮದ ರೈತರಾದ ಪರಮೇಶ್ವರಪ್ಪ, ರುದ್ರಪ್ಪ, ಬಸವರಾಜಪ್ಪ ಎಂಬುವರಿಗೆ ಸೇರಿದ ಹುಲ್ಲಿನ ಬಣವೆಗಳಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಇದರಿಂದ ಸುಮಾರು 18 ಲೋಡ್‌ಗೂ ಅಧಿಕ ಹುಲ್ಲಿನ ಬಣವೆಗಳು ಸುಟ್ಟು ಕರಕಲಾಗಿವೆ. ವಿಷಯ ತಿಳಿದ ಅಗ್ನಿಶಾಮಕ ದಳದಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಬೆಂಕಿ ನಂದಿಸಿದರು.
ಸುಮಾರು 30 ಟ್ರ್ಯಾಕ್ಟರ್‌ಲೋಡ್‌ನಷ್ಟು ಹುಲ್ಲಿನ
ಬಣವೆಯನ್ನು ರೈತರು ಸಂಗ್ರಹಿಸಿಟ್ಟಿದ್ದರು. ಸ್ಥಳೀಯ ರೈತರ ಸಮಯ ಪ್ರಜ್ಞೆ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಬೆಂಕಿ ನಂದಿಸಿದ್ದರಿಂದ ಬಣವೆಗಳು ಉಳಿದಿವೆ. 18 ಲೋಡ್‌ನಷ್ಟು ಬಣವೆ ಮಾತ್ರ ಸುಟ್ಟು ಭಸ್ಮವಾಗಿವೆ. ಬರಗಾಲದಲ್ಲಿ ಭತ್ತದ ಬಣವೆ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.



