ದಾವಣಗೆರೆ; ಜಿಲ್ಲಾಧಿಕಾರಿ ಕಚೇರಿ ಬಳಿಯ ಕೈಗಾರಿಕ ಪ್ರದೇಶದಲ್ಲಿ ಫ್ಲೈ ವುಡ್ ಕೈಗಾರಿಕೆಯೊಂದರಲ್ಲಿ ತಡ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ನೋಡ ನೋಡುತ್ತಿದ್ದಂತೆ ಇಡೀ ಫ್ಯಾಕ್ಟರಿಗೆ ಬೆಂಕಿ ಆವರಿಸಿ ಧಗ ಧಗ ಹೊತ್ತಿ ಉರಿದಿದೆ.
ಧನುಷ್ ಎಂಬುವರಿಗೆ ಸೇರಿದ ಫ್ಯಾಕ್ಟರಿ ಇದ್ದಾಗಿದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಬೆಂಕಿ ನೋಡಿದ ಸ್ಥಳೀಯರು ಕೂಡಲೇ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಇಡೀ ಫ್ಯಾಕ್ಟರಿ ಬೆಂಕಿಗೆ ಆಹುತಿಯಾಗಿದೆ. ವುಡ್ ಫ್ಯಾಕ್ಟರಿ ಆಗಿದ್ದರಿಂದ ಬೆಂಕಿ ಬೇಗ ವ್ಯಾಪಿಸಿದೆ. 40 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.



