Connect with us

Dvgsuddi Kannada | online news portal | Kannada news online

ಸರ್ಕಾರದಿಂದ ರೈತರ ಬೋರ್ ವೆಲ್ ಗೆ ಮಂಜೂರಾಗಿದ್ದ ಟಿಸಿಯನ್ನೇ ಮಾರಿಕೊಂಡ ಅಧಿಕಾರಿಗಳು…!!!

ದಾವಣಗೆರೆ

ಸರ್ಕಾರದಿಂದ ರೈತರ ಬೋರ್ ವೆಲ್ ಗೆ ಮಂಜೂರಾಗಿದ್ದ ಟಿಸಿಯನ್ನೇ ಮಾರಿಕೊಂಡ ಅಧಿಕಾರಿಗಳು…!!!

ದಾವಣಗೆರೆ: ಸರ್ಕಾರದ ಯೋಜನೆಯ ಅರ್ಹ ರೈತರಿಗೆ ನೀಡಬೇಕಾದ ಬೋರ್ ವೆಲ್ ಸರ್ಕಾರಿ ಅಧಿಕಾರಿಗಳು ವಿದ್ಯುತ್‌ ಪರಿವರ್ತಕ (ಟಿಸಿ) ಅಧಿಕಾರಿಗಳೇ ಮಾರಿಕೊಂಡಿರುವ ಪ್ರಕರಣ ನಡೆದಿದೆ.ಆದಿಜಾಂಬವ ಅಭಿವೃದ್ಧಿ ನಿಗಮದಡಿ ಕೊರೆಸಲಾಗಿದ್ದ ಕೊಳವೆ ಬಾವಿಗೆ ಒಬ್ಬ ರೈತನಿಗೆ ಹಳೆಯ ಟಿಸಿ ನೀಡಿದ್ದು, ಇನ್ನೊಬ್ಬ ರೈತನಿಗೆ ನೀಡಬೇಕಿದ್ದ ಟಿಸಿಯನ್ನೇ ಅಧಿಕಾರಿಗಳು ಮಾರಿಕೊಂಡಿದ್ದಾರೆ‌

ಈ ಬಗ್ಗೆ ದಾವಣಗೆರೆ ತಾ.ಪಂ. ತ್ತೈಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾಯಕೊಂಡ ಶಾಸಕ ಕೆ.ಎಸ್‌. ಬಸವಂತಪ್ಪ ಈ ವಿಷಯ ಬಹಿರಂಗಪಡಿಸಿದ್ದಾರೆ.ಆದಿಜಾಂಬವ ಅಭಿವೃದ್ಧಿ ನಿಗಮದ ಮೂಲಕ ಕೊಳವೆಬಾವಿ ಕೊರೆಸಲಾಗಿದ್ದ ಕಂದಗಲ್ಲು ಗ್ರಾಮದ ಗಂಗಾಧರಪ್ಪ ಅವರಿಗೆ ಪಂಪ್‌ಸೆಟ್‌, ಪೈಪ್‌ ಕೊಟ್ಟಿದ್ದಾರೆ. ಆದರೆ ಹೊಸ ಟಿಸಿ ಬದಲು ಹಳೆಯದನ್ನು ಕೊಟ್ಟಿದ್ದಾರೆ. ಹುಲಿಕಟ್ಟೆ ಗ್ರಾಮದ ಚನ್ನಬಸಪ್ಪ ಅವರಿಗೆ ಕೊಳವೆಬಾವಿ ಕೊರೆಸಿದ 3 ವರ್ಷದ ಬಳಿಕ ಟಿಸಿಯನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಇದಕ್ಕೆ ಯಾರು ಹೊಣೆ ಎಂದರು.

ತಾ.ಪಂ. ಆಡಳಿತಾಧಿಕಾರಿ ಕೃಷ್ಣ ನಾಯ್ಕ ಮತ್ತು ಇಒ ರಾಮ ಭೋವಿ ಈ ಬಗ್ಗೆ ತನಿಖೆ ಮಾಡಿ ವಾರದೊಳಗೆ  ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಸೌಲಭ್ಯ ದುರ್ಬಳಕೆ ಮಾಡಿಕೊಂಡ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ‌.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top