ದಾವಣಗೆರೆ: ಭದ್ರಾ ಡ್ಯಾಂನಿಂದ ನಾಲೆಗೆ ನೀರು ಸ್ಥಗಿತ ಖಂಡಿಸಿ ಭಾರತೀಯ ರೈತ ಒಕ್ಕೂಟ ನೇತೃತ್ವದಲ್ಲಿ ರೈತರು ಇಂದು ಬೃಹತ್ ಟ್ರ್ಯಾಕ್ಟರ್ ರ್‍ಯಾಲಿಗೆ ಮುಂದಾಗಿದ್ದರು. ರೈತರ ರ್‍ಯಾಲಿ ತಡೆದ ಪೊಲೀಸರು, ಮುಂಜಾಗ್ರತಾ ಕ್ರಮವಾಗಿ ಬಂಧಿಸಿ ಬಳಿಕ ಬಿಡುಗಡೆ ಮಾಡಿದರು. ಬಂಧನಕ್ಕೂ ಮುನ್ನ ರೈತರು, ನೀರು ಸ್ಥಗಿತಗೊಳಿಸಿದ ಸರ್ಕಾರದ ನಿರ್ಧಾರ ವಿರುದ್ಧ ಕಿಡಿಕಾರಿದರು.
ಹಳೆ ಪಿ.ಬಿ. ರಸ್ತೆಯ ಬೀರಲಿಂಗೇಶ್ವರ ದೇವಸ್ಥಾನ ಆವರಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಟ್ರ್ಯಾಕ್ಟರ್ ರ್‍ಯಾಲಿ ನಡೆಸಲು ರೈತರು ನಿರ್ಧರಿಸಿದ್ದರು. ಇದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ನೀರಾವರಿ ಸಲಹಾ ಸಮಿತಿ ತೀರ್ಮಾನದಂತೆ 100 ದಿನಗಳ ಕಾಲ ನಿರಂತರವಾಗಿ ನೀರು ಹರಿಸಬೇಕು ಒತ್ತಾಯಿಸಿದರು. 35ಕ್ಕೂ ಹೆಚ್ಚು ರೈತ ಮುಖಂಡರು ಹಾಗೂ ರೈತರನ್ನು ಬಂಧಿಸಿದ ಪೊಲೀಸರು ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನಕ್ಕೆ ಕರೆದೊಯ್ದು ಬಿಡುಗಡೆ ಮಾಡಿದರು.
ಏಕಾಏಕಿ ನೀರಿಲ್ಲ ಎಂದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಹೋರಾಟಕ್ಕೂ ಅವಕಾಶ ನೀಡುವುದಿಲ್ಲ ಎಂದರೆ ಹೇಗೆ? ಟ್ರ್ಯಾಕ್ಟರ್ ರ್‍ಯಾಲಿಗೆ ಅವಕಾಶ ಕೊಡಬೇಕು ಹೋರಾಟಗಾರರ ನಡುವೆ ವಾಗ್ವಾದ ನಡೆಸಿದರು. ರೈತರು ರಸ್ತೆ ತಡೆಗೆ ಮುಂದಾದರು. ಆಗ ಪೊಲೀಸರು ರೈತರನ್ನು ಬಂಧಿಸಿದರು. ಈ ಸರ್ಕಾರ ಒಂದು ವಾರದಿಂದ ರೈತರು ಹೋರಾಟ ನಡೆಸುತ್ತಿದ್ದರೂ ಯಾರೊಬ್ಬರೂ ಕಾಳಜಿ ತೋರುತ್ತಿಲ್ಲೆಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಭಾರತೀಯ ರೈತ ಒಕ್ಕೂಟದ ಶಾಮನೂರು ಎಚ್.ಆರ್. ಲಿಂಗರಾಜ್ , ರೈತ ಮುಖಂಡರಾದ ಬಿ.ಎಂ. ಸತೀಶ್, ಬಿ. ನಾಗೇಶ್ವರ ರಾವ್, ಲೋಕಿಕೆರೆ ನಾಗರಾಜ್, ಎಚ್.ಎನ್. ಗುರುನಾಥ್, ಟಿ.ಜಿ. ರವಿ ಕುಮಾರ್ ಮತ್ತಿತರರು ಇದ್ದರು.
ದಾವಣಗೆರೆ: ಹೊಸ ರಾಶಿ ಅಡಿಕೆ ದಿಢೀರ್ 3 ಸಾವಿರ ಕುಸಿತ; ಹಳೆಯ ಅಡಿಕೆ ಬೆಲೆಯಲ್ಲಿ ಸ್ವಲ್ಪ ಚೇತರಿಕೆ..!
ದಾವಣಗೆರೆ; KSRTC ಬಸ್ ಬ್ರೇಕ್ ಫೇಲ್ ; ಚಾಲಕನ ಚಾಣಾಕ್ಷತನದಿಂದ ತಪ್ಪಿದ ಭಾರೀ ಅನಾಹುತ….!



