Connect with us

Dvgsuddi Kannada | online news portal | Kannada news online

ದಾವಣಗೆರೆ; ಉಕ್ಕಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ ರೈತ

ದಾವಣಗೆರೆ

ದಾವಣಗೆರೆ; ಉಕ್ಕಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ ರೈತ

ದಾವಣಗೆರೆ: ರೈತನೊಬ್ಬ ತೋಟದಿಂದ ವಾಪಸ್​ ಮನೆಗೆ ಬರುವಾಗ ಉಕ್ಕಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿಕ್ಕಗಂಗೂರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರಾಜಪ್ಪ (52) ಹಳ್ಳದಲ್ಲಿ ಕೊಚ್ಚಿ ಹೋದ ರೈತನಾಗಿದ್ದಾನೆ. ಚಿಕ್ಕಗಂಗೂರ ಗ್ರಾಮದ ಬಳಿಯ ಹಿರೇಹಳ್ಳದಲ್ಲಿ ಈ ಘಟನೆ ಜರುಗಿದ್ದು, ತೋಟದಿಂದ ವಾಪಸ್​ ಮನೆಗೆ ಬರುವಾಗ ಈ ಘಟನೆ ನಡೆದಿದೆ. ಕೊಚ್ಚಿ ಹೋದ ರೈತನಿಗಾಗಿ ಅಗ್ನಿ ಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top