ದಾವಣಗೆರೆ: ಅಡಿಕೆ ತೋಟ ಉಳಿಸಿಕೊಳ್ಳಲು ಕೊರೆಸಿದ ಎರಡೂ ಬೋರ್‌ವೆಲ್ ಫೇಲ್ ಆಗಿದ್ದಕ್ಕೆ ಬೇಸತ್ತು ತಾಲೂಕಿನ ಕೊಗ್ಗನೂರು ಗ್ರಾಮದ ರೈತ ಕೆ.ಎಸ್. ಶಿವಪ್ಪ (51) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶಿವಪ್ಪ ಹೊಂದಿದ್ದ ಮೂರೂವರೆ ಎಕರೆ ಜಮೀನಿನಲ್ಲಿ ಎರಡು ವರ್ಷದ ಅಡಕೆ ಬೆಳೆಗಳಿಗೆ ನೀರುಣಿಸಬೇಕಿತ್ತು. ಮೊದಲಿನ ಬೋರ್‌ವೆಲ್‌ನಲ್ಲಿ ಅಂತರ್ಜಲ ಬತ್ತಿತ್ತು. ಒಂದು ತಿಂಗಳಲ್ಲಿ ಎರಡು ಬೋರ್‌ವೆಲ್ ಕೊರೆಸಿದ್ದರೂ ನಿರೀಕ್ಷಿತ ನೀರು ಬಿದ್ದಿರಲಿಲ್ಲ. ಖಾಸಗಿ ಸಾಲ ಮಾಡಿಕೊಂಡಿದ್ದ ಇದರಿಂದ ಬೇಸತ್ತ ಶಿವಪ್ಪ, ಬೆಳಗ್ಗೆ ಕೃಷಿ ಕೆಲಸಕ್ಕೆ ಹೋಗಿದ್ದು ಮನೆಗೆ ಮರಳಿರಲಿಲ್ಲ. ಮಗ ಸ್ಥಳಕ್ಕೆ ಬಂದು ನೋಡಿದಾಗ ತಂದೆ ಮೃತಪಟ್ಟಿದ್ದು ಕಂಡುಬಂದಿದೆ. ಪತ್ನಿ, ಇಬ್ಬರು ಪುತ್ರರಿದ್ದಾರೆ. ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



