ದಾವಣಗೆರೆ: ಅಡಿಕೆ ಕೊಯ್ಯುವಾಗ ಜಮೀನಿನಲ್ಲಿ ಹಾದು ಹೋಗಿರುವ 11 ಕೆವಿ ವಿದ್ಯುತ್ ತಂತಿ ತಗುಲಿ ರೈತ ಸಾವನ್ನಪ್ಪಿದ ಘಟನೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ತಣಿಗೆರೆಯಲ್ಲಿ ನಡೆದಿದೆ.
ತಣಿಗೆರೆ ಗ್ರಾಮದ ಅಡಿಕೆ ತೋಟದಲ್ಲಿ ಕೊಯ್ಲು ಮಾಡುವಾಗ ತೋಟದಲ್ಲಿ ಹಾದು ಹೋಗಿರುವ 11 ಕೆವಿ ವಿದ್ಯುತ್ ತಂತಿ ಗಾಳಿಗೆ ಮರಕ್ಕೆ ತಗುಲಿದೆ. ಈ ವೇಳೆ ಅಡಿಕೆ ಕೊಯ್ಲು ಮಾಡುತ್ತಿದ್ದ ರೈತ ವೀರಭದ್ರಪ್ಪಗೆ (47) ಶಾಕ್ ಹೊಡೆದಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ವೀರಭದ್ರಪ್ಪನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.