ದಾವಣಗೆರೆ: ಜಮೀನಿನಲ್ಲಿ ಮೇವು ಕೊಯ್ಯುವಾಗ ಹಾವು ಕಚ್ಚಿ ರೈತನೊಬ್ಬ ಸಾವ*ನ್ನಪ್ಪಿದ ಘಟನೆ ತಾಲೂಕಿನ ಆಲೂರು ಗ್ರಾಮದಲ್ಲಿ ನಡೆದಿದೆ.
ಹನುಮಂತಪ್ಪ (52) ಸಾವ*ನ್ನಪ್ಪಿದ ರೈತ. ತಮ್ಮ ಜಮೀನಿನಲ್ಲಿ ಜಾನುವಾರುಗಳಿಗೆ ಮೇವು ಕೊಯ್ಯಲು ಬೆಳಗ್ಗೆ ಹೋಗಿದ್ದರು. ಮೇವು ಕೊಯ್ಯುವಾಗ ಹಾವು ಕಚ್ಚಿದೆ. ಆದರೆ, ರೈತ ಯಾವುದೋ ಏನೋ ಕಚ್ಚಿದೆ ಎಂದು ನಿರ್ಲಕ್ಷ್ಯ ವಹಿಸಿದ್ದಾನೆ. ಸ್ವಲ್ಪ ಸಮಯದಲ್ಲಿ ವಿಷ ಮೈ ಆವರಿಸಿ ಸ್ಥಳದಲ್ಲಿಯೇ ಕುಸಿದುಬಿದ್ದು ಸಾವನ್ನಪ್ಪಿದ್ದಾನೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.



