ದಾವಣಗೆರೆ: ಪಂಪ್‌ಸೆಟ್ ದುರಸ್ತಿ ಮಾಡುವಾಗ ವಿದ್ಯುತ್ ಶಾಕ್ ಹೊಡೆದು ಅಪ್ಪ – ಮಗ ಮೃತಪಟ್ಟಿರುವ ದಾರುಣ ಘಟನೆ ಉಕ್ಕಡಗಾತ್ರಿ ಸಮೀಪದ ರಾಣೇಬೆನ್ನೂರು ತಾಲ್ಲೂಕಿನ ಪತ್ತೇಪುರ ಗ್ರಾಮದಲ್ಲಿ ನಡೆದಿದೆ.
ಭತ್ತದ ಬೆಳೆಗೆ ನೀರು ಹಾಯಿಸುವ ಪಂಪ್ ಸೆಟ್ ಹಾಳಾಗಿದ್ದು , ದುರಸ್ತಿ ಮಾಡಿ ಮೋಟಾರು ಸ್ಟಾರ್ಟ್ ಮಾಡಲು ಹೋದಾಗ ಈ ದುರ್ಘಟನೆ ಸಂಭವಿಸಿದೆ. ವಿದ್ಯುತ್ ಆಘಾತದಿಂದ ತಂದೆ-ಮಗ ಪಂಪಸೇಟ್ ಮೇಲೆಯೇ ಬಿದ್ದು ದಾರುಣ ಅಂತ್ಯ ಕಂಡಿದ್ದಾರೆ.
ಕರಬಸಪ್ಪ ಕಡೇನಾಯಕನಹಳ್ಳಿ(50) ಹಾಗೂ ಅವರ ಮಗ ದರ್ಶನ (26) ಮೃತ ದುರ್ದೈವಿಗಳಾಗಿದ್ದಾರೆ . ಹಲಗೇರಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ತೆರಳಿದ್ದ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಮಳೆಗಾಲದಲ್ಲಿ ರೈತರ ವಿದ್ಯುತ್ ಗ್ರೌಂಡ್ ಬಗ್ಗೆ ರೈತರು ಎಚ್ಚರಿಕೆ ವಹಿಸಬೇಕು ಎಂದು ಬೆಸ್ಕಾಂ ತಿಳಿಸಿದೆ.



