ದಾವಣಗೆರೆ: ನೀವು ಹಿಟ್ಟಿನ ಗಿರಣಿ, ಖಾರದ ಪುಡಿ, ಶಾವಿಗೆ, ರೊಟ್ಟಿ ಯಂತ್ರದ ಹೀಗೆ ಸಣ್ಣ ಉದ್ಯಮ ಪ್ರಾರಂಭಿಸಬೇಕು ಎಂದ್ಕೊಂಡಿದ್ದಿರಾ..? ಶೇ. 90 ರಷ್ಟು ಸಹಾಯ ಧನಕ್ಕೆ ಕೂಡಲೇ ಅರ್ಜಿ ಸಲ್ಲಿಸಿ..!
2022 -23ನೇ ಸಾಲಿನ ಕೃಷಿ ಸಂಸ್ಕರಣಾ ಯೋಜನೆಯಡಿ ಕೃಷಿ ಸಂಸ್ಕರಣಾ ಘಟಕಗಳಿಗೆ ಸಹಾಯಧನ ಲಭ್ಯವಿದ್ದು, ರಾಗಿ ಕ್ಲೀನಿಂಗ್ ಮೆಷಿನ್, ಹಿಟ್ಟಿನ ಗಿರಣಿ, ಖಾರದ ಪುಡಿ, ಎಣ್ಣೆ ಗಾಣ, ಕಬ್ಬಿನ ರಸ ತೆಗೆಯುವ ಯಂತ್ರ, ರೊಟ್ಟಿ, ಶಾವಿಗೆ ಮಾಡುವ ಯಂತ್ರಗಳಿಗೆ ಸಾಮಾನ್ಯ ವರ್ಗದವರಿಗೆ ಶೇ.50 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ.90 ಸಹಾಯಧನ ಸೌಲಭ್ಯವಿದ್ದು ಆಸಕ್ತ ರೈತರು ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಲು ಕೋರಿದೆ. ಅರ್ಜಿ ಸಲ್ಲಿಸಲು ಮಾರ್ಚ್3 ಕೊನೆ ದಿನ ಎಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



