ಹೊನ್ನಾಳಿ: ನಾನು ಮುಖ್ಯಮಂತ್ರಿಯಾಗಿದ್ದಾಗ ಸಂಗೊಳ್ಳಿ ರಾಯಣ್ಣ ಇದ್ದಂತಹ ಪ್ರದೇಶ ಅಭಿವೃದ್ಧಿಪಡಿಸಲು ರಾಯಣ್ಣ ಪ್ರಾಧಿಕಾರ ರಚನೆಗೆ 270 ಕೋಟಿಗೂ ಹೆಚ್ಚು ಹಣ ಬಿಡುಗಡೆ ಮಾಡಿದ್ದೆ. ಆದರೆ, ಸರ್ಕಾದಿಂದ ಬರಬೇಕಾದ 50 ಕೋಟಿ ಇನ್ನು ಬಂದಿಲ್ಲ. ಹೀಗಾಗಿ ಸಿಎಂ ಯಡಿಯೂರಪ್ಪ ಮೂಲಕ ಕಿತ್ತೂರು ರಾಣಿ ಚನ್ನಮ್ಮ ಹೆಸರಲ್ಲದ್ರೂ ಬಿಡುಗಡೆ ಮಾಡಿಸಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಹೊನ್ನಾಳಿ ತಾಲೂಕಿನ ಯಕ್ಕನಹಳ್ಳಿಯಲ್ಲಿ ನಿರ್ಮಿಸಿದ ರಾಯಣ್ಣ ಕಂಚಿನ ಪ್ರತಿಮೆ ಉದ್ಘಾಟಿಸಿ ಮಾತನಾಡಿದರು. ಸಿಎಂ ಯಡಿಯೂರಪ್ಪ ನಿಮ್ಮ ಮಾತು ಕೇಳುತ್ತಾರೆ. ಹೀಗಾಗಿ ರಾಯಣ್ಣ ಪ್ರಾಧಿಕಾರಕ್ಕೆ ಉಳಿದ ಹಣ ಬಿಡುಗಡೆ ಮಾಡಿಸಿ ಎಂದರು. ರಾಯಣ್ಣ ಕುರುಬ ಜಾತಿಯಲ್ಲಿ ಹುಟ್ಟಿರಬಹುದು. ಆದರೆ, ಕುರುಬ ಜಾತಿ ಮಾತ್ರ ಸೀಮಿತವಾಗಿಲ್ಲ.
ಸಂಗೊಳ್ಳಿ ರಾಯಣ್ಣ ವೀರ ಪರಾಕ್ರಮಿ, ಪ್ರಾಣದ ಹಂಗು ತೊರೆದು ಬ್ರಿಟಿಷರ ವಿರುದ್ದ ಹೋರಾಟ ಮಾಡಿದ ದೇಶಭಕ್ತ. ಬ್ರಿಟಿಷರನ್ನು ತೊಲಗಿಸಲು ಹೋರಾಡಿದವರು. ನಮ್ಮವರನ್ನೇ ಸಪೋರ್ಟ್ ತಗೊಂಡು ಬ್ರಿಟಿಷರು ಯುದ್ದ ಗೆದ್ದರು. ರಾಯಣ್ಣನಿಗೆ ನಮ್ಮವರೇ ಮೋಸ ಮಾಡಿದರು. ರಾಯಣ್ಣನಿಗೆ ಮೋಸ ಮಾಡಿದ ರೀತಿ ನಮ್ಮೊಳಗೂ ಮೋಸ ಮಾಡುವ ದ್ರೋಹಿಗಳು ಇರುತ್ತಾರೆ ಎಂದು ಪಕ್ಷೇತರರ ಹೆಸರು ಹೇಳದೇ ಮಾತಿನಲ್ಲಿಯೇ ತಿವಿದರು.



