Connect with us

Dvgsuddi Kannada | online news portal | Kannada news online

ದಾವಣಗೆರೆ; ಕಾಡಾನೆ ಹಿಡಿಯಲು ಸಕ್ರೆಬೈಲು ಸಾಕಾನೆಗಳ ಮೊರೆ; ಸೂಳೆಕೆರೆ ಸುತ್ತಮುತ್ತಲಿನ ಜನರಿಗೆ ಎಚ್ಚರಿಕೆ

ದಾವಣಗೆರೆ

ದಾವಣಗೆರೆ; ಕಾಡಾನೆ ಹಿಡಿಯಲು ಸಕ್ರೆಬೈಲು ಸಾಕಾನೆಗಳ ಮೊರೆ; ಸೂಳೆಕೆರೆ ಸುತ್ತಮುತ್ತಲಿನ ಜನರಿಗೆ ಎಚ್ಚರಿಕೆ

ಚನ್ನಗಿರಿ: ಯುವತಿ ಬಲಿ ಪಡೆದು ಚನ್ನಗಿರಿ ತಾಲ್ಲೂಕಿನ ಜನರ ನಿದ್ದೆಗೆಡಿಸಿದ ಕಾಡಾನೆ ಹಿಡಿಯಲು ಅರಣ್ಯ ಇಲಾಖೆ ಸಾಕಾನೆಗಳ ಮೊರೆ ಹೋಗಿದೆ. ಸೂಳೆಕೆರೆ ಹಿನ್ನೀರಿನ ಪ್ರದೇಶದಲ್ಲಿರುವ ಗಂಡು ಕಾಡಾನೆ ಆನೆಯನ್ನು ಸೆರೆ ಹಿಡಿಯಲು ಶಿವಮೊಗ್ಗದ ಸಕ್ರೆಬೈಲು ಆನೆ ಶಿಬಿರದಿಂದ ಆನೆಗಳನ್ನು ಕರೆ ತರಲಾಗಿದೆ.

ಆನೆ ಸದ್ಯ ನೆಲೆ ಕಂಡುಕೊಂಡಿರುವ ಸ್ಥಳದ ಸಮೀಪವಿರುವ ಕುಕ್ಕುವಾಡ-ಉಬ್ರಾಣಿ ಅರಣ್ಯ ಪ್ರದೇಶದತ್ತ ಓಡಿಸುವುದು. ಸಾಕು ಆನೆಗಳ ನೆರವಿನಿಂದ ಅರಿವಳಿಕೆ ಮದ್ದು ನೀಡಿ ಸೆರೆ ಹಿಡಿಯಲು ಸಿದ್ಧತೆ ನಡೆಸಿದ್ದೇವೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಟಿ. ಹನುಮಂತಪ್ಪ ಮಾಹಿತಿ ನೀಡಿದ್ದಾರೆ.ಅರಸೀಕೆರೆ, ಶಿವನಿ, ಹೊಳಲ್ಕೆರೆ ಮಾರ್ಗವಾಗಿ ಚನ್ನಗಿರಿ ತಾಲ್ಲೂಕು ಪ್ರವೇಶಿಸಿ ಸೂಳೆಕೆರೆಯತ್ತ ಬಂದಿರುವ ಈ ಸಲಗ, ಶನಿವಾರ ಮೂರು ಬಾರಿ ದಾವಣಗೆರೆ-ಚನ್ನಗಿರಿ ರಾಜ್ಯ ಹೆದ್ದಾರಿ ದಾಟಲು ಪ್ರಯತ್ನಿಸಿದೆ. ಆದರೆ, ಅಲ್ಲಿನ ವಾಹನ ಸಂಚಾರ ಹಾಗೂ ಜನದಟ್ಟಣೆಯಿಂದ ಬೆದರಿ ಮತ್ತೆ ಕೆರೆಯತ್ತಲೇ ಮರಳಿದೆ. ಹೀಗಾಗಿ ಅದನ್ನು ಅಲ್ಲಿಂದ ತೆರಳುವಂತೆ ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳು ನಿಗಾ ವಹಿಸಿದ್ದಾರೆ. ದಾವಣಗೆರೆ, ಚನ್ನಗಿರಿ, ಭದ್ರಾವತಿ, ಶಂಕರ, ಆಯನೂರು, ಉಂಬ್ಳೆಬೈಲು, ಹೊಳಲ್ಕೆರೆ ಅರಣ್ಯ ವಲಯದ 150ಕ್ಕೂ ಹೆಚ್ಚು ಅಧಿಕಾರಿ-ಸಿಬ್ಬಂದಿ ಸೂಳೆಕೆರೆಯಲ್ಲಿಯೇ ಬೀಡುಬಿಟ್ಟಿದ್ದಾರೆ.

ಸೂಳೆಕೆರೆ ಸುತ್ತಲಿನ ಗ್ರಾಮಗಳಲ್ಲಿ ಡಂಗುರ ಹೊಡೆಸಲಾಗಿದೆ. ಗಾಬರಿ ಆಗದಂತೆ, ಅರಣ್ಯ ಇಲಾಖೆಯ ಕಾರ್ಯಾಚರಣೆಗೆ ಸಹಕರಿಸುವಂತೆ ಹಾಗೂ ಆನೆಗೆ ತೊಂದರೆ ಕೊಡದಂತೆ ಸಹಕರಿಸಲು ಗ್ರಾಮಸ್ಥರನ್ನು ಕೋರಿದ್ದಾರೆ.ಆನೆಯ ಸೆರೆಗೆ ಬೆಂಗಳೂರಿನಿಂದ ಡ್ರೋಣ್ ತಂಡ ಬರಲಿದೆ. ಬೆಂಗಳೂರು, ನಾಗರಹೊಳೆ, ಮೈಸೂರು ಹಾಗೂ ಸಕ್ರೆಬೈಲಿನಿಂದ ವೈದ್ಯರ ತಂಡ ಬರಲಿದೆ. ಆನೆ ಬೀಡುಬಿಟ್ಟಿರುವುದು ಅತ್ಯಂತ ಸೂಕ್ಷ್ಮ ಪ್ರದೇಶ. ಜನವಸತಿಯ ಸುರಕ್ಷತೆಯೂ ಮುಖ್ಯ. ಹೀಗಾಗಿ‌ ಜನರಿಗೆ ಎಚ್ಚರಿಕೆ ನೀಡಲಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top