ದಾವಣಗೆರೆ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಮತಗಳ ಎಣಿಕೆ ಕಾರ್ಯ ಮೇ 13ರಂದು ಬೆಳಗ್ಗೆ 06.00 ಗಂಟೆಯಿಂದ ಮದ್ಯಾಹ್ನ 2 ಗಂಟೆ ವರೆಗೆ ತೋಳಹುಣಸೆಯ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ. ಹೀಗಾಗಿ ಈ ಕೆಳಕಂಡ ಸಂಚಾರಿ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.
- ದಾವಣಗೆರೆಯಿಂದ ಸಂತೆಬೆನ್ನೂರು, ಚನ್ನಗಿರಿಗೆ ಹೋಗುವ ವಾಹನ ಸವಾರರು ಶಿರಮಗೊಂಡನಹಳ್ಳಿ, ಹದಡಿ ಮೂಲಕ ಚನ್ನಗಿರಿ ಕಡೆಗೆ ಹೋಗುವುದು.
- ಚನ್ನಗಿರಿ ಕಡೆಯಿಂದ ಸಂತೆಬೆನ್ನೂರು ಮಾರ್ಗವಾಗಿ ದಾವಣಗೆರೆ ಕಡೆಗೆ ಕುರ್ಕಿಯ ಹತ್ತಿರ ಎಡ ತಿರುವು ತೆಗೆದುಕೊಂಡು ಹದಡಿಯಿಂದದಾವಣಗೆರೆ ಕಡೆಗೆ ಬರುವುದು
- ಚಿತ್ರದುರ್ಗ ಕಡೆಗೆ ಹೋಗುವವರು
ಕುರ್ಕಿಯ ಹತ್ತಿರ ಬಲ ತಿರುವು ತೆಗೆದುಕೊಂಡು ಆನಗೋಡು ಮುಖಾಂತರ ಚಿತ್ರದುರ್ಗ, ಬೆಂಗಳೂರು ಕಡೆಗೆ ಹೋಗುವುದು.
ಚುನಾವಣಾ ಏಜೆಂಟರುಗಳು ಹಾಗೂ ಮತ ಕೇಂದ್ರದಲ್ಲಿ ಬರುವವರು ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಮೊಬೈಲ್‌ಗಳನ್ನು ತರಕೂಡದು.
ಸದರಿ ಉಪಕರಣಗಳನ್ನು ಮತ ಎಣಿಕಾ ಕೇಂದ್ರದ ಒಳಗಡೆ ಸಂಪೂರ್ಣವಾಗಿ
ನಿಷೇದಿಸಲಾಗಿದೆ.