ದಾವಣಗೆರೆ; ಮಾರ್ಚ್‌19, 20ರಂದು ನಗರ ದೇವತೆ ದುಗ್ಗಮ್ಮ ಜಾತ್ರೆ; ವಿಜೃಂಭಣೆಯಿಂದ ಆಚರಿಸಲು ತೀರ್ಮಾನ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ: ನಗರ ದೇವತೆ ದುರ್ಗಾಂಬಿಕಾ ದೇವಿ ಜಾತ್ರೆ ಮಾರ್ಚ್ 19, 20ರಂದು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಈ ಬಾರಿ ವಿಜೃಂಭಣೆಯಿಂದ ಜಾತ್ರೆ ಮಹೋತ್ಸವ ಆಚರಿಸಲು ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ ನಿರ್ಧರಿಸಿದೆ.

ದಾವಣಗೆರೆ ನಗರದ ದುಗ್ಗಮ್ಮ ದೇವಸ್ಥಾನದ ಮುಂಭಾಗದ ಪ್ರಸಾದ ನಿಲಯದಲ್ಲಿ ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷರೂ, ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಧರ್ಮದರ್ಶಿ ಗೌಡ್ರು ಚನ್ನಬಸಪ್ಪರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳಳಾಯಿತು. ಫೆಬ್ರವರಿ 13 ಹಂದರ ಕಂಬ ಪೂಜೆ, ಮಾರ್ಚ್ 19, 20ಕೆ ಶ್ರೀ ದುರ್ಗಂಬಿಕಾ ದೇವಿಯ ಜಾತ್ರೆ ನಡೆಲಿದೆ. ಸಂದರ್ಭದಲ್ಲಿ ಟ್ರಸ್ಟಿನ ಎಲ್ಲಾ ಸದಸ್ಯರು, ಗೌಡರು, ಶಾನುಭೋಗರು, ರೈತರು, ಬಾರೀಕರು, ಬಣಕಾರು, ಕುಂಬಾರರು, ಬಡಗಿ, ತಾಳವಾರರು, ಭಕ್ತರು, ಕಾರ್ಯಕರ್ತರು ಭಾಗವಹಿಸಿದ್ದರು.

ಸಭೆಯಲ್ಲಿ ಶಾಮನೂರು ಶಿವಶಂಕರಪ್ಪ, ದೇವಸ್ಥಾನದ ಪುರೋಹಿತರಾದ ನಾಗರಾಜ್ ಜೋಯಿಸ್ ಅವರು ದಿನಾಂಕ ಘೋಷಿಸಿದರು. ಫೆಬ್ರುವರಿ 13ರಂದು ಬೆಳಗ್ಗೆ 11ಗಂಟೆಗೆ ಹಂದರ ಕಂಬ ಪೂಜೆಯ ಮೂಲಕ ಹಬ್ಬಕ್ಕೆ ಚಾಲನೆ ಸಿಗಲಿದೆ.ಮಾರ್ಚ್ 17ರಂದು ಬೆಳಗ್ಗೆ ದೇವಿಗೆ ಪಂಚಾಮೃತ ಅಭಿಷೇಕ, ರಾತ್ರಿ 8ಗಂಟೆಗೆ ಕಂಕಣಧಾರಣೆ, ನಂತರ ಕೋಣದೊಂದಿಗೆ ನಗರದಲ್ಲಿ ಸಾರುವುದು, 18, 19ರಂದು ದೇವಿಗೆ ವಿಶೇಷ ಅಲಂಕಾರ, ಭಕ್ತಿ ಸಮರ್ಪಣೆ, 20ರಂದು ಮುಂಜಾನೆ ಚರಗ ಕಾರ್ಯಕ್ರಮಗಳು ನಡೆಯಲಿವೆ. ಜೊತೆಗೆ ಪ್ರತಿ ವರ್ಷದಂತೆ ಕುರಿಕಾಳಗ, ಕುಸ್ತಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

ಕುರಿ ಕಾಳಗ ಬೇಡ ಎಂದಿದ್ದಕ್ಕೆ ಕೆಲವರು ಕುಸ್ತಿ ಕಾಳಗವೂ ಬೇಡ ಎಂದರು.ಸರಳವಾಗಿ ಆಚರಿಸಿ ಎಂಬ ಅಭಿಪ್ರಾಯವೂ ವ್ಯಕ್ತವಾಗಿಯಿತು. ಆಗ ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿ ವಾಗ್ವಾದ ಜರುಗಿತು. ಆಗ ಶಾಮನೂರು ಶಿವಶಂಕರಪ್ಪ ಅವರು ಪ್ರತಿ ವರ್ಷ ನಡೆಸುವ ಜಾತ್ರೆಯಂತೆ ಎಲ್ಲಾ ಕಾರ್ಯಕ್ರಮಗಳು ಮುಂದುವರೆಯಲಿ, ಯಾವುದೇ ಬದಲಾವಣೆ ಮಾಡುವುದು ಬೇಡ. ಕುರಿಕಾಳಗ ಸೇರಿ ಎಲ್ಲ ನಡೆಯಲಿದೆ ಎಂದರು.

ಬಿಲ್ಡಿಂಗ್ ನಿರ್ಮಾಣ ವಿಚಾರಕ್ಕೆ ಶಾಮನೂರು ಶಿವಶಂಕರಪ್ಪ, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾದವ್ ನಡುವೆ ವಾಗ್ವಾದ ನಡೆಯಿತು. ಜಿಎಸ್‌ಟಿ ಕಟ್ಟಿದ್ದ ವಿಚಾರಕ್ಕೆ ಅಥಣಿ ವೀರಣ್ಣನವರನ್ನು ಪ್ರಶ್ನೆ ಮಾಡಿದ ಘಟನೆ ನಡೆಯಿತು. ಈ ವೇಳೆಯೂ ವಾಗ್ವಾದ ಉಂಟಾಯಿತು. ಈ ಸಂದರ್ಭದಲ್ಲಿ ಮೇಯರ್ ವಿನಾಯಕ್ ಪೈಲ್ವಾನ್, ಉಪಮೇಯರ್ ಯಶೋಧ ಹೆಗ್ಗಪ್ಪ ಸೇರಿದಂತೆ ಹಿರಿಯ ಮುಖಂಡರು, ಸಮಿತಿಯವರು, ಯುವಕರು ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *