Connect with us

Dvgsuddi Kannada | online news portal | Kannada news online

ದಾವಣಗೆರೆ: ಧೂಡಾ ಭೂ ಸ್ವಾಧೀನ ನೋಟಿಸ್ ಗೆ  ಹಳೇ ಕುಂದುವಾಡ ರೈತರ ತೀವ್ರ ವಿರೋಧ

ದಾವಣಗೆರೆ

ದಾವಣಗೆರೆ: ಧೂಡಾ ಭೂ ಸ್ವಾಧೀನ ನೋಟಿಸ್ ಗೆ  ಹಳೇ ಕುಂದುವಾಡ ರೈತರ ತೀವ್ರ ವಿರೋಧ

ದಾವಣಗೆರೆ: ದಾವಣಗೆರೆ-ಹರಿಹರ ನಗರಾಭಿವೃದ್ದಿ ಪ್ರಾಧಿಕಾರ( ಢೂಡಾ)  ಹಳೇ ಕುಂದುವಾಡದಲ್ಲಿ ಸುಮಾರು 53 ಎಕರೆಯಷ್ಟು ವಸತಿ ಯೋಜನೆ ಅಭಿವೃದ್ದಿಪಡಿಸಲು ಮುಂದಾಗಿದೆ.  ಇತ್ತೀಚಿಗೆ ದೂಡಾ ಪ್ರಕಟಣೆಯೊಂದನ್ನು ಹೊರಡಿಸಿದ್ದು, 53 ಎಕರೆ ಜಮೀನಿನ ಅಕ್ಕಪಕ್ಕದ ಸುಮಾರು 150 ಎಕರೆ ಜಮೀನನ್ನು ಭೂ ಸ್ವಾಧೀನ ಮಾಡುವುದಾಗಿ ಆದೇಶ ಹೊರಡಿಸಿದೆ. ಇದಕ್ಕೆ ಹಳೇ ಕುಂದುವಾಡ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕೂಡಲೇ ಪ್ರಕಟಣೆ ವಾಪಸ್ ಪಡೆಯಬೇಕೆಂದು ರೈತರು ಆಗ್ರಹಿಸಿದ್ದಾರೆ.

ಈ ಹಿಂದೆ ಕೇವಲ 53 ಎಕರೆ ಜಮೀನು ಮಾತ್ರ ಬಡಾವಣೆ ನಿರ್ಮಿಸುವುದಾಗಿ ದೂಡ ಹೇಳಿತ್ತು.  ಈಗ ರೈತರ ಒಪ್ಪಿಗೆ ಹಾಗೂ ಮಾಹಿತಿ ನೀಡದೇ ಏಕಾಏಕಿ ಸುಮಾರು 150 ಎಕರೆ ಜಮೀನು ಭೂ ಸ್ವಾಧೀನ ಮಾಡುತ್ತೇವೆ ಎಂದು ಪ್ರಕಟಣೆ ಹೊರಡಿಸಿದ್ದಾರೆ. ಇದು  ರೈತರನ್ನು ಒಕ್ಕಲೆಬ್ಬಿಸುವ ಕುತಂತ್ರ. 22 ಸಾವಿರ ಸೈಟ್ ಬೇಡಿಕೆ ಅರ್ಜಿ ಬಂದಿವೆ ಅದಕ್ಕೆ 150 ಎಕರೆ ಜಮೀನು ಸ್ವಾಧೀನ ಮಾಡುತ್ತೇವೆ. ಯಾರು ಜಮೀನು ಕೊಳ್ಳಬೇಡಿ ಎಂದು ದೂಡ ಪ್ರಕಟಣೆ ಹೊರಡಿಸಿದೆ ಎಂದು  ಸುದ್ದಿಗೋಷ್ಠಿಯಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಇನ್ನೊಂದು ಭಾರೀ ಅರ್ಜಿ ಕರೆದರೆ 30 ಸಾವಿರ ಅರ್ಜಿ ಬರಬಹುದು.  ಆಗ ಇಡೀ ಕುಂದುವಾಡವನ್ನೇ ಸ್ವಾಧೀನ ಮಾಡಿಕೊಂಡು ಗ್ರಾಮಸ್ಥರನ್ನು ಬೇರೆ ರಾಜ್ಯಕ್ಕೆ ಕಳುಹಿಸುತ್ತೀರಾ ಎಂದು ಪ್ರಶ್ನಿಸಿದರು. ಈ ಹಿಂದೆ  ಕುಂದುವಾಡದಲ್ಲಿ ಕರ್ನಾಟಕ ಹೌಸಿಂಗ್ ಬೋರ್ಡ್ ನಿಂದ ಸುಮಾರು 300 ಎಕರೆಯಷ್ಟು ತುಂಗಾಭದ್ರ ಬಡಾವಣೆ ನಿರ್ಮಾಣವಾಗಿದೆ.  ಈಗ ಉಳಿದ ಅಲ್ಪ ಸ್ವಲ್ಪ ಉಳಿದ ಜಮೀನುಗಳನ್ನು ವಶಪಡಿಸಿಕೊಂಡು ಬಡಾವಣೆ ನಿರ್ಮಿಸಿ ರೈತರನ್ನು ಒಕ್ಕಲೆಬ್ಬಿಸುವುದು ಸರಿಯಲ್ಲ.. ಯಾವುದೇ ಬಡಾವಣೆ ನಿರ್ಮಾಣ ಮಾಡದೇ ವ್ಯವಸಾಯ ಮಾಡಿಕೊಂಡು ಜೀವನ ನಡೆಸಲು ಬಿಡಿ ಎಂದು ರೈತರು ಮೂಲಕ‌ ಮನವಿ ಮಾಡಿದರು.

ಈ ಕೂಡಲೇ  ಧೂಡಾ ಪ್ರಕರಣೆ  ವಾಪಾಸ್ ಪಡೆಯಬೇಕು.  ರೈತರ ಒಪ್ಪಿಗೆ ಇದ್ದರೆ ಮಾತ್ರ ಜಮೀನು ಖರೀದಿಸಿ ಬಡಾವಣೆ ನಿರ್ಮಿಸುತ್ತೇವೆ ಎಂದು ಒಂದು ವಾರದೊಳಗೆ ದೂಡಾ ಅಧ್ಯಕ್ಷರು, ಆಯುಕ್ತರು ಪ್ರಕಟಣೆ ಹೊರಡಿಸಬೇಕು. ಇಲ್ಲದಿದ್ದಲ್ಲಿ  ಧೂಡಾ ಕಚೇರಿಗೆ ಬೀಗ ಜಡಿದು ಅಮರಾಣಾಂತ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ರೈತರು  ಎಚ್ಚರಿಕೆ‌ ನೀಡಿದರು.

ಸುದ್ದಿಗೋಷ್ಠಿಯಲ್ಲಿ ರೈತರಾದ ಮಿಟ್ಲಕಟ್ಟೆ ಚಂದ್ರಪ್ಪ, ಹೆಚ್ ಜಿ ಗಣೇಶಪ್ಪ, ಹೆಚ್ ಎನ್ ಗುರುನಾಥ್, ಎನ್ ಶಿವಪ್ಪ, ಜೆ ಮಾರುತಿ, ಹೆಚ್ ಜಿ ಮಂಜಪ್ಪ ಜೆ ಆರ್ ಮಹಾಂತೇಶ್ ಉಪಸ್ಥಿತರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top