ದಾವಣಗೆರೆ: ಜಿಲ್ಲೆಯಲ್ಲಿ ವೃತ್ತಿ ರಂಗಭೂಮಿ ರಂಗಾಯಣ ಪ್ರಪ್ರಥಮವಾಗಿ ಆಜಾದಿ ಕಾ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ಯುವಕರಲ್ಲಿ ಮತ್ತು ಶಾಲಾ , ಕಾಲೇಜು ಮಕ್ಕಳಲ್ಲಿ ರಂಗಾಸಕ್ತಿಯನ್ನು ಬೆಳೆಸಲು ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ಏಕಾಂಕ ನಾಟಕ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಕಾಲೇಜು ಹಾಗೂ ಶಾಲಾ ವಿದ್ಯಾರ್ಥಿಗಳು ನಾಟಕ ಕಲೆಯಲ್ಲಿ ತಮ್ಮ ಪ್ರತಿಭೆ ಮೆರೆದು ಬಹುಮಾನ ಪಡೆಯಬಹುದು. ಸ್ಫರ್ದೆಯಲ್ಲಿ ಭಾಗವಹಿಸುವವರು, ಶಾಲಾ ಕಾಲೇಜುಗಳು ಅರ್ಜಿಗಳನ್ನು ರಂಗಯಾಣ ಕಚೇರಿಯಲ್ಲಿ ಪಡೆದು, 2022 ಜನವರಿ 10 ರ ಒಳಗಾಗಿ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ವಿಶೇಷಾಧಿಕಾರಿಗಳು, ವೃತ್ತಿ ರಂಗಭೂಮಿ, ರಂಗಾಯಣ ಪದ್ಮಶ್ರೀ ಚಿಂದೋಡಿಲೀಲಾ ಕಲಾಕ್ಷೇತ್ರ, ಎಂ.ಸಿ.ಸಿ.-ಬಿ.ಬ್ಲಾಕ್ ದಾವಣಗೆರೆ ದೂ.ಸಂ: 08192-200635 ಅನ್ನು ಸಂಪರ್ಕಿಸಬಹುದೆಂದು ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.