Connect with us

Dvg Suddi-Kannada News

ದೂಡಾ ಕಚೇರಿ ಗಣಕೀಕರಣಕ್ಕೆ ಸಾಫ್ಟ್ ವೇರ್ ಕಂಪೆನಿಯೊಂದಿಗೆ ಸಭೆ

ದಾವಣಗೆರೆ

ದೂಡಾ ಕಚೇರಿ ಗಣಕೀಕರಣಕ್ಕೆ ಸಾಫ್ಟ್ ವೇರ್ ಕಂಪೆನಿಯೊಂದಿಗೆ ಸಭೆ

ದಾವಣಗೆರೆ: ದೂಡಾದ ಪ್ರತಿಯೊಂದು ಸೇವೆಯು ಹಾಗೂ ವಿನ್ಯಾಸಗಳು  ಸಾರ್ವಜನಿಕರಿಗೆ ಸುಲಭವಾಗಿ ಸಿಗುವಂತೆ ಮಾಡಲು ಹಾಗೂ ದೂಡಾ ಕಛೇರಿಯನ್ನು ಸಂಪೂರ್ಣ ಗಣಕೀಕರಣ ಕುರಿತು ಸಾಫ್ಟ್  ವೇರ್ ಕಂಪೆನಿಯೊಂದಿಗೆ ಸಭೆ ನಡೆಯಿತು.

ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮತ್ತು ಆಯುಕ್ತರಾದ ಬಿ.ಟಿ.ಕುಮಾರಸ್ವಾಮಿ ಇವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಾಧಿಕಾರದ ಎಲ್ಲಾ ಶಾಖೆಯ ಮುಖ್ಯಸ್ಥರು ಮತ್ತು ಅಧಿಕಾರಿಗಳು ಹಾಗೂ ಬೆಂಗಳೂರಿನಿಂದ ಆಗಮಿಸಿದ ಸಾಫ್ಟ್‍ವೇರ್ ಕಂಪನಿಯ ಪ್ರತಿನಿಧಿಗಳು ಭಾಗಿಯಾಗಿದ್ದರು.

ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪ್ರತಿನಿತ್ಯ ನೂರಾರು ಜನ ದಾಖಲೆಗಳನ್ನು ಹರಸಿ ಬರುತ್ತಿರುತ್ತಾರೆ ಹಾಗೂ ಸಾರ್ವಜನಿಕರಿಗೆ ದಾವಣಗೆರೆ ನಗರದ ಅಥವಾ ದೂಡಾ ವ್ಯಾಪ್ತಿಯಲ್ಲಿರುವ ನಿವೇಶನಗಳಲ್ಲಿ ಯಾವುದು ಅನುಮೋದಿತ, ಯಾವುದು ಅನುಮೋದಿತವಲ್ಲ ಎಂಬುದು ತಿಳಿಯುವುದು ಕಷ್ಟಕರವಾಗಿರುತ್ತದೆ.  ಬಡವ, ಮಧ್ಯಮ ವರ್ಗದವರಿಗೆ ಸಾಕಷ್ಟು ಅನಾನುಕೂಲಗಳು ಆಗುತ್ತಿರುವುದು ಮತ್ತು ಎಷ್ಟೋ ಕಡೆ ಪಾರ್ಕ್, ರಸ್ತೆ, ಸಿ.ಎ. ನಿವೇಶನಗಳನ್ನು ಒತ್ತುವರಿ ಮಾಡಿಕೊಂಡಿರುವುದನ್ನು ಗಮನಿಸಲಾಗಿದೆ. ಈ ಬಗ್ಗೆ ಹಾಗೂ ಹಾಲಿ ಇರುವ ಎಲ್ಲಾ ದಾಖಲೆಗಳನ್ನು ಗಣಕೀಕರಣಗೊಳಿಸಿ, ಪರಿಶೀಲಿಸಿ ಅವುಗಳ ನೈಜತೆ ಖಚಿತಪಡಿಸಿಕೊಂಡು ವೆಬ್‍ಸೈಟ್ ಮೂಲಕ ಪ್ರತಿಯೊಂದು ನಕ್ಷೆಯು ಸಾರ್ವಜನಿಕ ವೀಕ್ಷಣೆಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಇಂದು ಸಾಫ್ಟ್‍ವೇರ್ ಕಂಪನಿಯ ಪ್ರತಿನಿಧಿಗಳೊಂದಿಗೆ ಚರ್ಚಿಸಲಾಯಿತು.

ಹಾಗೂ ಮುಂಬರುವ ದಿನಗಳಲ್ಲಿ ದೂಡಾ ಕಛೇರಿಯನ್ನು ಸಂಪೂರ್ಣವಾಗಿ ಪೇಪರ್‍ಲೆಸ್ ಆಫೀಸ್ ಮಾಡುವ ನಿಟ್ಟಿನಲ್ಲಿ ಅಧಿಕಾರಿ ಮತ್ತು ನೌಕರರಿಗೆ ಈ ಬಗ್ಗೆ ಹೆಚ್ಚಿನ ತರಬೇತಿ ಹಾಗೂ ಅದಕ್ಕೆ ಸಂಬಂಧಿಸಿದಂತೆ ಪೂರಕ ತಂತ್ರಜ್ಞಾನ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿಯೂ ಸಾಫ್ಟ್‍ವೇರ್ ತಂತ್ರಜ್ಞರೊಂದಿಗೆ ಚರ್ಚಿಸಲಾಯಿತು. ಹಾಗೂ ಆದಷ್ಟು ಬೇಗ ಇದನ್ನು ದೂಡಾ ಕಛೇರಿಯಲ್ಲಿ ಅನುಷ್ಟಾನಗೊಳಿಸುವ ಬಗ್ಗೆ ಮತ್ತು ಇದಕ್ಕೆ ಬೇಕಾಗುವ ಆರ್ಥಿಕ ವೆಚ್ಚವನ್ನು ಈ ಬಾರಿಯ ಆಯ-ವ್ಯಯದಲ್ಲಿ ಮೀಸಲಿಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಪ್ರಾಧಿಕಾರದ ಸದಸ್ಯರಾದ ಜಯರುದ್ರೇಶ್, ಜಂಟಿ ನಿರ್ದೇಶಕರಾದ ಎಂ.ಅಣ್ಣಪ್ಪ, ಸಹಾಯಕ ನಿರ್ದೇಶಕರಾದ ಬಿ.ರೇಣುಕಾ ಪ್ರಸಾದ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಕೆ.ಹೆಚ್.ಶ್ರೀಕರ್, ಸಹಾಯಕ ಇಂಜಿನಿಯರಾದ ಎನ್.ಸುಜಯ್‍ಕುಮಾರ್ ಮತ್ತು ನಗರ ಯೋಜಕರಾದ ಶ್ರೀ ಭರತಕುಮಾರ್.ಟಿ.ಪಿ ಸಭೆಯಲ್ಲಿ ಉಪಸ್ಥಿತರಿದ್ದರು.

 

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top