ದಾವಣಗೆರೆ: ವಾಹನಗಳಲ್ಲಿ ಕಾನೂನು ಬಾಹಿರವಾಗಿ ಕರ್ಕಶ ಧ್ವನಿ ಹೊರಸೂಸುವ ಧ್ವನಿ ವರ್ಧಕ( ಸೌಂಡ್ ಹರ್ನ್ಸ್) ಗಳನ್ನು ಬಳಸುವವರ ವಿರುದ್ಧ ಜಿಲ್ಲಾ ಪೊಲೀಸರು ಇಂದು ವಿಶೇಷ ಕಾರ್ಯಾಚರಣೆ ನಡೆಸಿದರು.
ನಗರದಲ್ಲಿ ಸಿಪಿಐ ನೇತೃತ್ವದಲ್ಲಿ ಪಿಎಸ್ ಐ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಈ ಮೂಲಕ ವಾಹನ ಚಾಲಕರಿಗೆ ಸೌಂಡ್ ಹಾರ್ನ್ಸ್ ಬಳಸದಂತೆ ತಿಳುವಳಿಕೆ ನೀಡಲಾಯಿತು. ಈಗಾಗಲೇ ಅಳವಡಿಸಿಕೊಂಡಿರುವ ವಾಹನಗಳಿಂದ ತೆಗೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ನೂರಾರು ವಾಹನಗಳಿಂದ ಕರ್ಕಶ ಸೌಂಡ್ ಹಾರ್ನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಾರ್ವಜನಿಕರ ಗಮನಕ್ಕೆ: ದಾವಣಗೆರೆ ಜಿಲ್ಲೆಯಲ್ಲಿ ಸಾರ್ವಜನಿಕರು ತಮ್ಮ ಯಾವುದೇ ವಾಹನಗಳಲ್ಲಿ ಕರ್ಕಶ ದ್ವನಿಯ ಸೌಂಡ್ ಹಾರ್ನ್ ಗಳನ್ನು ಬಳಸಬಾರದು. ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ಸಂಚಾರ ಸುರಕ್ಷತೆಗೆ ದಾವಣಗೆರೆ ಜಿಲ್ಲಾ ಪೊಲೀಸ್ ನೊಂದಿಗೆ ಸಹಕರಿಸಲು ಈ ಮೂಲಕ ತಿಳಿಸಲಾಗಿದೆ.