ದಾವಣಗೆರೆ: ನಗರಾಭಿವೃದ್ದಿ ಸಚಿವರು ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಅವರು ಮೇ 7 ಮತ್ತು 8 ರಂದು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಸಚಿವರು ಮೇ 6 ರ ಸಂಜೆ 6.30 ಗಂಟೆಗೆ ಬೆಂಗಳೂರಿನಿಂದ ಹೊರಟು ರಾತ್ರಿ 7.30 ಕ್ಕೆ ಹಿರಿಯೂರು ತಲುಪಿ ವಾಸ್ತವ್ಯ ಮಾಡುವರು. ಮೇ 7 ರ ಬೆಳಗ್ಗೆ 6.30 ಕ್ಕೆ ಹಿರಿಯೂರಿನಿಂದ ಹೊರಟು ಬೆಳಗ್ಗೆ 8.30 ಕ್ಕೆ ದಾವಣಗೆರೆಯ ಪ್ರವಾಸಿ ಮಂದಿರಕ್ಕೆ ಆಗಮಿಸುವರು. ಬೆಳಿಗ್ಗೆ 10 ಗಂಟೆಗೆ ಕೋವಿಡ್-19 ನಿಯಂತ್ರಣದ ಕುರಿತು ಕೈಗೊಳ್ಳಲಾಗಿರುವ ಹಾಗೂ ಕೈಗೊಳ್ಳಬೇಕಾಗಿರುವ ಮುಂಜಾಗ್ರತಾ ಕ್ರಮಗಳ ಕುರಿತು ಜಿಲ್ಲೆಯ ಜನಪ್ರತಿನಿಧಿಗಳ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಸಭೆ ನಡೆಸುವರು.
ಅದೇ ದಿನ ಮಧ್ಯಾಹ್ನ 12.30 ಗಂಟೆಗೆ ದಾವಣಗೆರೆಯಿಂದ ಹೊರಟು ಚಿತ್ರದುರ್ಗದ ಮಾರ್ಗವಾಗಿ ಮಧ್ಯಾಹ್ನ 2.30ಕ್ಕೆ ಹಿರಿಯೂರು ತಲುಪಿ ವಾಸ್ತವ್ಯ ಮಾಡುವರು. ಮೇ.08 ರಂದು ಬೆಳಗ್ಗೆ 8.30 ಕ್ಕೆ ಹಿರಿಯೂರಿನಿಂದ ಹೊರಟು ಬೆಳಗ್ಗೆ 10.30 ಕ್ಕೆ ದಾವಣಗೆರೆಯ ಪ್ರವಾಸಿ ಮಂದಿರಕ್ಕೆ ಆಗಮಿಸುವರು. ನಂತರ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.30 ರವರೆಗೆ ದಾವಣಗೆರೆ ಜಿಲ್ಲೆಯ ಜಿಲ್ಲಾ ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್‍ಗಳಿಗೆ ಭೇಟಿ ಹಾಗೂ ಪರಿಶೀಲನೆ ಮಾಡುವರು. ಅದೇ ದಿನ ಮಧ್ಯಾಹ್ನ 12.30 ಗಂಟೆಗೆ ದಾವಣಗೆರೆಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ಸಿ. ನಾಗರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



