ದಾವಣಗೆರೆ: ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಬಡವರ ಮತ್ತು ಮಧ್ಯಮ ವರ್ಗದವರಿಗೆ ಬಜೆಟ್. ಇದೊಂದು ಅತ್ಯುತ್ತಮ ಬಜೆಟ್ ಆಗಿದ್ದು, ಐದು ಗ್ಯಾರಂಟಿಗಳನ್ನು ಈಡೇರಿಸಲು ಒಳ್ಳೆಯ ಬಜೆಟ್ ಕೊಟ್ಟಿದ್ದಾರೆ ಎಂದು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಮ್ಮ ಸರ್ಕಾರ ಮಾಡಿದ್ದ ಯೋಜನೆಗಳು ಸ್ಥಗಿತವಾಗಿದ್ದವು. ಈ ಅವುಗಳನ್ನು ಈಗ ಮತ್ತೆ ಕಾರ್ಯರೂಪಕ್ಕೆ ತಂದಿದ್ದೇವೆ ದಾವಣಗೆರೆ ಜಿಲ್ಲೆಯಲ್ಲಿ ಈ ಹಿಂದೆ ನಡೆದ ಕಾಮಗಾರಿಗಳ ಬಗ್ಗೆ ನಾವು ತನಿಖೆ ನಡೆಸುತ್ತೇವೆ. ಅದರ ವರದಿ ಬಂದ ಮೇಲೆ ಇವರ ಹಣೆಬರಹ ಜನರಿಗೆ ಗೊತ್ತಾಗುತ್ತದೆ. ಎಲ್ಲೆಲ್ಲಿ ಕಳೆಪೆಯಾಗಿವೆ ಅವುಗಳನ್ನು ನಾವು ತೋರಿಸುತ್ತೇವೆ. ಜಿಲ್ಲೆಯ ಕೆಲ ಇಲಾಖೆಗಳಲ್ಲಿ ಭ್ರಷ್ಟಾಚಾರ, ಅವ್ಯವಹಾರ ಆಗಿದೆ ಎಂದು ಅರ್ಜಿ ಬಂದಿವೆ. ಸರ್ಕಾರಿ ಭೂಮಿಯನ್ನು ದುರುಪಯೋಗ ಮಾಡಿರುವ ಕುರಿತು ತನಿಖೆ ಮಾಡುತ್ತೇವೆ ಎಂದು ಬಿಜೆಪಿ ವಿರುದ್ದ ಹರಿಹಾಯ್ದರು.
ಬಿಜೆಪಿಯವರಿ ಕುಂದವಾಡ ಕೆರೆಗೆ 13 ಕೋಟಿ ಖರ್ಚು ಮಾಡಿದ್ದಾರೆ. ಆದರೆ, ನಾವು ಮಾಡಿದ್ದು ಖರ್ಚು ಮಾಡಿದ್ದೇ 3 ಕೋಟಿ. ಇಂತಹ ಕೆಲಸಗಳು ಸಾಕಷ್ಟು ಆಗಿವೆ. ಎಲ್ಲೆಲಿ ಕಳಪೆ ಕಾಮಗಾರಿಗಳು ನಡೆದಿವೆ ಅದರ ಬಗ್ಗೆ ತನಿಖೆ ಮಾಡತ್ತೇವೆ. ನಮ್ಮ ತಂದೆಯವರು ಹೇಳಿದಂತೆ ಹಾಲಿ ಸಂಸದ ಜಿಎಂ ಸಿದ್ದೇಶ್ವರ್ ಅವರನ್ನು ಸೋಲಿಸುವುದೇ ನಮ್ಮ ಪಕ್ಷದ ಗುರಿ ಎಂದರು.



