ದಾವಣಗೆರೆ: ನಗರಾಭಿವೃದ್ದಿ ಸಚಿವ ಜಿಲ್ಲಾ ಉಸ್ತುವಾರಿ ಭೈರತಿ ಬಸವರಾಜ ಡಿ. 02 ಮತ್ತು 03 ರಂದು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಡಿ.02 ರಂದು ಬೆಂಗಳೂರಿನಿಂದ ಹೊರಟು ಬೆಳಿಗ್ಗೆ 10 ಗಂಟೆಗೆ ದಾವಣಗೆರೆ ಜಿಲ್ಲೆ ಅಣಜಿ ಗ್ರಾಮಕ್ಕೆ ಆಗಮಿಸುವರು. ಬಳಿಕ ಬೆ. 11 ಗಂಟೆಗೆ ಆನಗೋಡು, ಮಧ್ಯಾಹ್ನ 01 ಗಂಟೆಗೆ ನರಗನಹಳ್ಳಿ, ಮಧ್ಯಾಹ್ನ 3 ಗಂಟೆಗೆ ಬಾಡ, ಸಂಜೆ 4.30 ಗಂಟೆಗೆ ಶ್ಯಾಗಲೆ ಹಾಗೂ ಸಂಜೆ 5 ಗಂಟೆಗೆ ಬೆಳವನೂರು ಗ್ರಾಮಗಳಿಗೆ ಭೇಟಿ ನೀಡಿ ವಿಧಾನಪರಿಷತ್ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಸಂಜೆ 6 ಗಂಟೆಗೆ ದಾವಣಗೆರೆಗೆ ಆಗಮಿಸಿ ವಾಸ್ತವ್ಯ ಮಾಡುವರು. ಡಿ.03 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಸಂಜೆ 5 ಗಂಟೆಗೆ ಬೆಂಗಳೂರಿಗೆ ತೆರಳುವರೆಂದು ಸಚಿವರ ಅಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.



