ದಾವಣಗೆರೆ: ಕ್ರಿಸ್‍ಮಸ್ ಮತ್ತು ಹೊಸ ವರ್ಷದ ಪ್ರಯುಕ್ತ ಚರ್ಮದ ವಸ್ತುಗಳ ಮೇಲೆ ಲಿಡ್ಕರ್ ನಿಗಮ ಭರ್ಜರಿ ಆಫರ್ ಘೋಷಣೆ ಮಾಡಿದೆ.
ಡಿಸೆಂಬರ್ 20 ರಿಂದ ಜನವರಿ 5 ರವರೆಗೆ ಚರ್ಮದ ಪಾದರಕ್ಷೆ, ಶೂ, ಬೆಲ್ಟ್, ಪರ್ಸ್, ಟ್ಯಾವಲ್ ಬ್ಯಾಗ್, ಲ್ಯಾಪ್‍ಟಾಪ್ ಬ್ಯಾಗ್, ಮಹಿಳೆಯರ ಪರ್ಸ್, ವ್ಯಾನಟಿ ಬ್ಯಾಗ್‍ಗಳ ಮೇಲೆ ಶೇಕಡ 20 ರಿಂದ 40 ರಷ್ಟು ರಿಯಾಯತಿ ಇರುತ್ತದೆ. ಎವಿಕೆ ಕಾಲೇಜು ಬಳಿಯ ಲಿಡ್ಕರ್ ಕಚೇರಿಯಲ್ಲಿ ಮಾರಾಟ ನಡೆಯಲಿದೆ ಎಂದು ನಿಗಮದ ವ್ಯವಸ್ಥಾಪಕರು ತಿಳಿಸಿದ್ದಾರೆ.



