ದಾವಣಗೆರೆ: ಜಿಲ್ಲೆಯ ಅನೌಪಚಾರಿಕ ಪಡಿತರ ಪ್ರದೇಶಗಳಲ್ಲಿ ಆಹಾರ ನಿರೀಕ್ಷಕರು ಜಪ್ತಿ ಮಾಡಲಾದ ಒಟ್ಟು 117.89 ಕ್ವಿಂಟಲ್ ಅಕ್ಕಿಯನ್ನು ಜೂನ್ 20 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಎ.ಪಿ.ಎಂ.ಸಿ ಆವರಣದಲ್ಲಿರುವ ಕೆ.ಎಫ್.ಸಿ.ಎಸ್.ಸಿ ಸಗಟು ಮಳಿಗೆ 1 ಮತ್ತು 2 ರಲ್ಲಿ ಬಹಿರಂಗ ಹರಾಜು ಮಾಡಲಾಗುತ್ತದೆ.08 ನವಂಬರ್ 2022 ರಂದು ಮಾಗನಳ್ಳಿ ರಸ್ತೆಯ ಅರ್ಮಾನ್ ಟ್ರೇಡರ್ಸ ಗುಜರಿ ಶಾಪ್ ಮೂಭಾಗದ ಕೆ.ಎ 35-ಬಿ-2564 ನೇ ಟಾಟಾ ಎಸಿಇ ವಾಹನದಲ್ಲಿ ಅನುಮಾನಾಸ್ಪದವಾಗಿ ಸಾಗಿಸುತ್ತಿದ್ದ 24.39 ಕ್ವಿಂಟಾಲ್ ಅಕ್ಕಿ ಮತ್ತು 03 ಡಿಸೆಂಬರ್ 2022 ರಂದು ನಗರದ ವಿನಾಯಕ ಟಾಕೀಸ್ ರಸ್ತೆಯಲ್ಲಿರುವ ಕರ್ನಾಟಕ ಪಿ.ಸಿಎಸ್(ಮೇನ್) ನ್ಯಾಯಬೆಲೆ ಅಂಗಡಿ ಸಂ: 40 ರಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಲಾರಿಯಲ್ಲಿ ತುಂಬಯತ್ತಿದ್ದ 93.50 ಕ್ವಿಂಟಾಲ್ ಅಕ್ಕಿಯನ್ನು ಜಪ್ತಿ ಮಾಡಲಾಗಿದ್ದು,ಆಸಕ್ತರು ಹರಾಜು ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಶೇ 10 ರಷ್ಟು ಮೊಬಲಗು ಭದ್ರತಾ ಠೇವಣಿ ಪಾವತಿಸಿ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಜಿಲ್ಲಾ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



