Connect with us

Dvgsuddi Kannada | online news portal | Kannada news online

ಹಳೇ ಕುಂದುವಾಡ ಬಳಿ ಹೊಸ ಬಡಾವಣೆ ನಿರ್ಮಾಣಕ್ಕೆ ರೈತರಿಂದ ಜಮೀನು ಖರೀದಿಸಲು ಸಚಿವ ಸಂಪುಟ ಒಪ್ಪಿಗೆ

ದಾವಣಗೆರೆ

ಹಳೇ ಕುಂದುವಾಡ ಬಳಿ ಹೊಸ ಬಡಾವಣೆ ನಿರ್ಮಾಣಕ್ಕೆ ರೈತರಿಂದ ಜಮೀನು ಖರೀದಿಸಲು ಸಚಿವ ಸಂಪುಟ ಒಪ್ಪಿಗೆ

ದಾವಣಗೆರೆ: ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ (ದೂಢಾ) ನಗರದ ಹೊರ ವಲಯದ ಹಳೇ ಕುಂದುವಾಡ ಬಳಿ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಹೊಸ ಬಡಾವಣೆಗೆ ರೈತರಿಂದ ಜಮೀನು ಖರೀದಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ.

ಹಳೇ ಕುಂದುವಾಡದ 45 ರೈತರಿಂದ 52 ಎಕೆರೆ ಜಮೀನು ಖರೀದಿಸಲು ಒಪ್ಪಿಗೆ ಸೂಚಿಸಲಾಗಿದೆ. ಪ್ರತಿ ಎಕರೆಗೆ 1.38 ಕೋಟಿ ರೂಪಾಯಿಗೆ ರೈತರಿಗೆ ಕೊಡಲು ನಿರ್ಧರಿಸಲಾಗಿದೆ. ನಿನ್ನೆ ನಡೆದ ಸುಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸರ್ಕಾರದಿಂದ ಆದೇಶ ಪತ್ರ ಬಂದ ನಂತರ ರೈತರ ಜಮೀನು ಖರೀದಿಸಲಾಗುವುದು ಎಂದು ದೂಢಾ ಅಧ್ಯಕ್ಷ ಕೆ.ಎಂ.‌ಸುರೇಶ್ ತಿಳಿಸಿದ್ದಾರೆ.

ಈ ಹಿಂದೆ 1.18 ಕೋಟಿ ರೂಪಾಯಿಗೆ ಪ್ರತಿ ಎಕರೆಗೆ ದರ ನಿಗದಿ ಮಾಡಲಾಗಿತ್ತು. ಇದಕ್ಕೆ ರೈತರು ಒಪ್ಪಿಗೆ ನೀಡಿರಲಿಲ್ಲ, ನಂತರ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಪ್ರತಿ ಎಕರೆಗೆ 1.28 ಕೋಟಿ ಹಾಗೂ ಒಂದು ನಿವೇಶನ ನೀಡುವ ಭರವಸೆ ನೀಡಲಾಗಿತ್ತು. ಇದಾದ ನಂತರ ಮತ್ತೆ ಹಳೇ ಕುಂದುವಾಡ ರೈತರು ನಮ್ಮ ಜಮೀನು ಕೊಡುವುದಿಲ್ಲ ಎಂದು ದೂಢಾಗೆ ಮನವಿ ಸಲ್ಲಿಸಿದ್ದರು. ಇದೀಗ ಸರ್ಕಾರ ಎಕೆರೆಗೆ 1. 38 ಕೋಟಿ ದರ ನಿಗದಿ ಮಾಡಿದ್ದು, ಜಮೀನು ಮಾಲೀಕರಿಗೆ ಯಾವುದೇ ನಿವೇಶ ಕೊಡುವುದಿಲ್ಲ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top