Connect with us

Dvgsuddi Kannada | online news portal | Kannada news online

ಆರೋಗ್ಯದಾತ ಸ್ಮರಿಸುವುದೇ ಧನ್ವಂತರಿ ಜಯಂತಿಯ ವಿಶೇಷತೆ: ಡಾ. ರಾಘವೇಂದ್ರ ಗುರೂಜಿ

ಜ್ಯೋತಿಷ್ಯ

ಆರೋಗ್ಯದಾತ ಸ್ಮರಿಸುವುದೇ ಧನ್ವಂತರಿ ಜಯಂತಿಯ ವಿಶೇಷತೆ: ಡಾ. ರಾಘವೇಂದ್ರ ಗುರೂಜಿ

ದಾವಣಗೆರೆ: ಅಶ್ವಯುಜ ಕೃಷ್ಣ ತ್ರಯೋದಶಿ ಅಂದರೆ ಧನ ತ್ರಯೋದಶಿ, ಧನ್ವಂತರಿ ಜಯಂತಿಯನ್ನು ಭಾರತೀಯರು ಅನಾದಿಕಾಲದಿಂದಲೂ ಆಚರಿಸುತ್ತಾ ಬಂದಿದ್ದಾರೆ.  ಆರೋಗ್ಯದಾತನಾದ ಧನ್ವಂತರಿ ದೇವರನ್ನು ಸ್ಮರಿಸಿ ಶ್ರದ್ಧಾ ಭಕ್ತಿಯಿಂದ ಪೂಜಿಸುವುದೇ ಧನ್ವಂತರಿ ಜಯಂತಿಯ ವಿಶೇಷತೆ ಆಗಿದೆ ಎಂದು ನಗರದ ಆದರ್ಶಯೋಗ ಪ್ರತಿಷ್ಠಾನದ ಯೋಗಗುರು ಡಾ. ರಾಘವೇಂದ್ರ ಗುರೂಜಿ ಅಭಿಪ್ರಾಯಪಟ್ಟರು.

ಇಂದು ಪ್ರಾತಃಕಾಲ ನಗರದ ದೇವರಾಜ ನಗರದ ಅರಸು ಬಡಾವಣೆಯ ‘ಸಿ’ ಬ್ಲಾಕ್‌ನಲ್ಲಿರುವ ಆದರ್ಶ ಯೋಗ ಪ್ರತಿಷ್ಠಾನದಲ್ಲಿ  ಶ್ರೀ ಮಹಾಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದಲ್ಲಿ ಏರ್ಪಡಿಸಿದ್ದ ಧನ್ವಂತರಿ ಜಯಂತಿಯ ಪೂಜಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಧನ್ವಂತರಿ ಎಲ್ಲಾ ವೈದ್ಯರ ಪಾಲಿಗೆ ದೇವರು. ಮಹಾ ವಿಷ್ಣುವಿನ 24 ಅವತಾರಗಳಲ್ಲಿ 12ನೇ ಅವತಾರವೇ ಧನ್ವಂತರಿ ದೇವರು ಶ್ರೀ ಸೂಕ್ತದಲ್ಲಿ ಭೂಮಿ, ಜಲ, ವಾಯು, ಅಗ್ನಿ, ಸೂರ್ಯ ಇವುಗಳನ್ನು ಧನವೆಂದೇ ಕರೆಯಲಾಗಿದೆ. ಯಾವ ಧನಕ್ಕೆ ನಿಜವಾದ ಅರ್ಥವಿದೆಯೋ ಅದುವೇ ನಿಜವಾದ ಲಕ್ಷ್ಮಿ. ಆದ್ದರಿಂದ ಈ ದಿನ ಯಾರು ಧನ್ವಂತರಿಯನ್ನು ಆರಾಧಿಸುತ್ತಾರೋ ಅವರಿಗೆ ಸಕಲ ಐಶ್ವರ್ಯ, ಆರೋಗ್ಯವು ಸಮೃದ್ಧಿಯಾಗಿ ಲಭಿಸುತ್ತದೆ ಎಂದು ಗುರೂಜಿಯವರು ಧನ್ವಂತರಿ ಜಯಂತಿಯ ಮಹತ್ವವನ್ನು ವಿವರಿಸಿದರು. ಮತ್ತು ಭಾರತೀಯರು ನಮಸ್ಕಾರ ಮಾಡುವ ಪದ್ಧತಿಯಲ್ಲಿರುವ ವೈಜ್ಞಾನಿಕ ಆರೋಗ್ಯ ಸಂಪತ್ತನ್ನು ಉದಾಹರಣೆ ಮೂಲಕ ತಿಳಿಸಿಕೊಟ್ಟರು.

ಧನ್ವಂತರಿ ಪೂಜಾ ವಿಧಿ ವಿಧಾನಗಳನ್ನು ವಿಧಿವತ್ತಾಗಿ ನೆರವೇರಿಸಿದ ವೇದಮೂರ್ತಿ  ಹನುಮಂತ ಶಾಸ್ತ್ರೀಗಳು ಮಾತನಾಡಿ, ಧನ್ವಂತರಿ ದೇವರ ಆರಾಧನೆಯಿಂದ ಆರೋಗ್ಯ, ನೆಮ್ಮದಿ, ಧನ ಪ್ರಾಪ್ತಿಯಾಗುತ್ತದೆ. ಎಂದು ತಿಳಿಸಿದರು. ಚಿನ್ನ-ಬೆಳ್ಳಿ ವರ್ತಕರಾದ ಮುರಳಿಧರ ಆಚಾರ್ಯ ಮಾತನಾಡಿ ಧನ್ವಂತರಿ ಮಂತ್ರವನ್ನು ಪಠಿಸಿ ತಮ್ಮ ಅನುಭವವನ್ನು ಹಂಚಿಕೊಂಡರು.

ಪ್ರಾರಂಭದಲ್ಲಿ ಶಾಂತಿ ಮಂತ್ರದೊಂದಿಗೆ ಅಗ್ನಿ ಹೋತ್ರ ಹೋಮ ಪೂಜಾ ವಿಧಾನವನ್ನು ಯೋಗಗುರು ಡಾ. ರಾಘವೇಂದ್ರ ಗುರೂಜಿಯವರು ನೆರವೇರಿಸಿ ಶ್ರೀ ಧನ್ವಂತರಿಯ ಮೂಲಮಂತ್ರವನ್ನು 12 ಬಾರಿ ಪಠಿಸುವುದರೊಂದಿಗೆ ಭಾಗವಹಿಸಿದ ಎಲ್ಲರಿಗೂ ಭೋದಿಸಿದರು.

ಕೋವಿಡ್-19 ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಪಠಾಕಿ ರಹಿತ ದೀಪಾವಳಿ ಹಬ್ಬವನ್ನು ದೀಪ ಹಚ್ಚುವುದರೊಂದಿಗೆ ಮನೆ-ಮನ ಬೆಳಗಿಸಿರಿ ಎಂದು ಸಂದೇಶವನ್ನು ನೀಡಿದರು. ಎಸ್.ಬಿ.ಐ. ವಿಮಾ ಕಂಪನಿಯ ವೀರೇಶ್ ಮತ್ತು ಜಿಲ್ಲಾ ಪಂಚಾಯತ್ ಪಿ.ಡಿ.ಓ. ಸುರೇಖಾ ದಂಪತಿಗಳು ಶ್ರೀ ಧನ್ವಂತರಿ ಪೂಜಾ ಕೈಂಕರ್ಯವನ್ನು, ವೇದಮೂರ್ತಿ ಪೂಜ್ಯ ಹನುಮಂತ ಶಾಸ್ತ್ರೀ ಮಾರ್ಗದರ್ಶನದಲ್ಲಿ ನೆರವೇರಿಸಿದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

To Top
(adsbygoogle = window.adsbygoogle || []).push({});