ದಾವಣಗೆರೆ: ಸಾವು ಎಂಬ ವಿಧಿ ಯಾರಿಗೆ..?ಯಾವಾಗ..? ಬರುತ್ತೇ ಅಂತಾ ನಿರೀಕ್ಷೆ ಮಾಡಲು ಸಾಧ್ಯವಿಲ್ಲ…! ಅದರಲ್ಲೂ ದಂಪತಿಗಳು ಒಂದೇ ದಿನ ಸಹಜವಾಗಿ ಸಾವನ್ನಪ್ಪುವುದು, ಅಪರೂಪದಲ್ಲಿಯೇ ಅಪರೂಪ. ಇಂತಹದೊಂದು ಘಟನೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣ ಸಮೀಪದ ಚಿರಡೋಣಿಯಲ್ಲಿ ನಡೆದಿದೆ.
ಚಿರಡೋಣಿಯ ರೈತ ಹನುಮಂತಪ್ಪ (98) ಮತ್ತು ಅವರ ಪತ್ನಿ ಜಯಮ್ಮ (82) ಅವರು ನಿನ್ನೆ (ಆ.07 ) ಕೇವಲ ಒಂದೂವರೆ ಗಂಟೆಯ ಅವಧಿಯಲ್ಲಿ ನಿಧನರಾಗಿದ್ದಾರೆ. ಈ ವೃದ್ಧ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ. ನಿನ್ನೆ ಬೆಳಿಗ್ಗೆ 8.30ರಲ್ಲಿ ಜಯಮ್ಮ ವಯೋಸಹಜ ಕಾಯಿಲೆಯಿಂದ ನಿಧನರಾದರು. ಪತ್ನಿಯ ಅಗಲಿಕೆ ವಿಷಯ ತಿಳಿದು ಬೆಳಿಗ್ಗೆ 10ಕ್ಕೆ ಹನುಮಂತಪ್ಪ ಹೃದಯಾಘಾತದಿಂದ ನಿಧನರಾಗಿದ್ದಾರೆ. ದಂಪತಿಗೆ ನಾಲ್ವರು ಪುತ್ರಿಯರು, ಒಬ್ಬ ಪುತ್ರರಿದ್ದರು. ದಂಪತಿಯ ಅಂತ್ಯಕ್ರಿಯೆ ನಿನ್ನೆಯೇ ನಡೆದಿದೆ.



