ದಾವಣಗೆರೆ: ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಮಿತ(ಡಿಸಿಸಿ) ನಲ್ಲಿ ಖಾಲಿರುವ ವಿವಿಧ 48 ಹುದ್ದೆಗಳ ಭರ್ತಿಗೆ ಆನ್ ಲೈನ್ ಮುಖಾಂತರ ಅರ್ಜಿ ಆಹ್ವನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್ ಸೈಟ್ www,ddccbank.co.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಕೊರಿಯರ್, ಅಂಚೆ ಮೂಲಕ ಅರ್ಜಿ ಸಲ್ಲಿಸುವಂತಿಲ್ಲ. ಒಟ್ಟು 48 ವಿವಿಧ ಹುದ್ದೆಗಳಿಗೆ ಜೂನ್ 01ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಹುದ್ದೆಗಳ ಹೆಸರು: ಕಿರಿಯ ಸಹಾಯಕರು/ಕಿರಿಯ ಕ್ಷೇತ್ರಾಧಿಕಾರಿಗಳು, ಕಂಪ್ಯೂಟರ್ ಇಂಜಿನಿಯರ್, ಕಂಪ್ಯೂಟರ್ ಆಪರೇಟರ್, ವಾಹನ ಚಾಲಕರು, ಕಿರಿಯ ಸೇವಕರು (ಅಟೆಂಡರ್).
ಶೈಕ್ಷಣಿಕ ಅರ್ಹತೆ-ಕಿರಿಯ ಸಹಾಯಕರು: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್ ಹಾಗೂ ಸಹಕಾರ ವಿಷಯದಲ್ಲಿ ಅಧ್ಯಯನ, ಜ್ಞಾನ ಮತ್ತು ಅನುಭವ ಪಡೆದವರಿಗೆ ಆದ್ಯತೆ ನೀಡಲಾಗುವುದು. ಕಂಪ್ಯೂಟರ್ ಇಂಜಿನಿಯರ್: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಪ್ರೊಗ್ರಾಮರ್, ಬಿ.ಇ. ಸಿ.ಎಸ್., ಇ&ಸಿ, ಇ&ಇ ಇಂಜಿನಿಯರಿಂಗ್/ ಎಂ.ಸಿ.ಎ ಪದವಿಯಲ್ಲಿ ಉತ್ತೀರ್ಣರಾಗಿರಬೇಕು.
ಕಂಪ್ಯೂಟರ್ ಆಪರೇಟರ್: ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು ಅಥವಾ ಮೂರು ವರ್ಷದ ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ಉತ್ತೀರ್ಣರಾಗಿರಬೇಕು.ವಾಹನ ಚಾಲಕರು: ಕನಿಷ್ಠ 10ನೇ ತರಗತಿ/ ಎಸ್.ಎಸ್.ಎಲ್.ಸಿ ಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಊರ್ಜಿತ ಲಘು ವಾಹನ ಚಾಲನೆಯ ಲೈಸೆನ್ಸ್, ಬ್ಯಾಡ್ಜ್ ಹೊಂದಿರತಕ್ಕದ್ದು.ಕಿರಿಯ ಸೇವಕರು (ಅಟೆಂಡರ್): ಎಸ್.ಎಸ್.ಎಲ್.ಸಿ ಯಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಾನ: ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ನಿಗದಿಪಡಿಸಲಾಗಿದೆ ಹಾಗೂ ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ, ಹಿಂದುಳಿದ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ, ಪ.ಜಾತಿ/ ಪ.ಪಂ/ ಪ್ರವರ್ಗ 1ರ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ವಯೋಮಾನ ನಿಗದಿಪಡಿಸಲಾಗಿದೆ.
ಆಯ್ಕೆ ವಿಧಾನ: ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅರ್ಹತಾ ಪಟ್ಟಿಯನ್ನು ತಯಾರಿಸಿ 1:5ರ ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಪಡೆದ ಸರಾಸರಿ ಅಂಕಗಳನ್ನು ಶೇ. 85% ಕ್ಕೆ ಇಳಿಸಿ, ಪ್ರಾಪ್ತವಾಗುವ ಅಂಕಗಳ ಜೊತೆಗೆ ಸಂದರ್ಶನದಲ್ಲಿ ಗಳಿಸಿದ ಅಂಕಗಳನ್ನು ಕೂಡಿಸಿ ಅರ್ಹತಾ ಪಟ್ಟಿಯನ್ನು ತಯಾರಿಸಿ, ಮೀಸಲಾತಿ ನಿಯಮಗಳನ್ನು ಅನುಸರಿಸಿ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿ ನೇಮಕಾತಿ ಮಾಡಿಕೊಳ್ಳಲಾಗುವುದು.
ಅರ್ಜಿ ಶುಲ್ಕ: ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು ರೂ. 1000 ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ1ರ ಅಭ್ಯರ್ಥಿಗಳು ರೂ. 500 ಶುಲ್ಕ ಪಾವತಿಸಬೇಕು.ಶುಲ್ಕ ಪಾವತಿ ವಿಧಾನ: ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್ 01, 2022. ಅರ್ಜಿ ಸಲ್ಲಿಸಲು: https://www.recruitapp.in/davanagere-dccb/instruction ಲಿಂಕ್ ಗೆ ಮೇಲೆ ಕ್ಲಿಕ್ ಮಾಡಿ.