ದಾವಣಗೆರೆ: ದಾವಣಗೆರೆ ಡಿಸಿಸಿ ಬ್ಯಾಂಕ್ ನಿಂದ ಬೇನಾಮಿ ಹೆಸರಲ್ಲಿ ಸಾಲ ಪಡೆದು, ಹಣ ದುರುಪಯೋಗ ಮಾಡಿಕೊಂಡ ಆಡಳಿತ ಮಂಡಳಿ ವಿರುದ್ಧ ತನಿಖೆ ನಡೆಸಬೇಕು. ಸಾಲ ನೀಡಿದ ಸೂಸೈಟಿ ಸೂಪರ್ ಸೀಡ್ ಮಾಡುವಂತೆ ವಕೀಲ ಎಸ್. ಪರಮೇಶ್ ಆಗ್ರಹಿಸಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಡಿಸಿಸಿ ಬ್ಯಾಂಕ್ ನ ಹಿಂದಿನ ಅಧ್ಯಕ್ಷ ಜೆ. ಆರ್. ಷಣ್ಮುಖಪ್ಪ ಅಧಿಕಾರವಧಿಯಲ್ಲಿ ಅಕ್ರಮ ನಡೆದಿದೆ. ಬೇನಾಮಿ ಹೆಸರಲ್ಲಿ ನಕಲಿ ದಾಖಲೆ ಸೃಷ್ಠಿಸಿ 39.80 ಲಕ್ಷ ರೂ ಗಳನ್ನು ಸಾಲವಾಗಿ ಪಡೆದಿದ್ದಾರೆ. ದಾವಣಗೆರೆ ನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತಕ್ಕೆ ಅಲ್ಪಾವಧಿ ಸಾಲವಾಗಿ 39.80 ಲಕ್ಷ ನೀಡಿದ್ದು, ರೈತರ ಹೆಸರಿನಲ್ಲಿ ಪಡೆಯಲಾದ ಸಾಲವನ್ನು ಆಡಳಿತ ಮಂಡಳಿಯ ಪದಾಧಿಕಾರಿಗಳ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ನಕಲಿ ರೈತರ ಹೆಸರಲ್ಲಿ ಸಾಲ ನೀಡಿದ ಸೊಸೈಟಿ ಯನ್ನು ಸೂಪರ್ ಸೀಡ್ ಮಾಡುವ ಮೂಲಕ ತನಿಖೆ ನಡೆಸುವಂತೆ ಒತ್ತಾಯಿಸಿದರು. 19 ಜನ ರೈತರ ಹೆಸರಿನ ಮೇಲೆ ಪಡೆಯಲಾಗಿದ್ದ ಸಾಲದ ಈಗಾಗಲೇ ಇದೇ ವ್ಯಕ್ತಿಗಳು ಕಾಡಜ್ಜಿಯಲ್ಲಿ ಇರುವ ಸಹಕಾರ ಸಂಘದಲ್ಲಿ ಸಾಲ ಪಡೆದಿದ್ದು ಅವರ ಹೆಸರಿನಲ್ಲಿ ಬೇನಾಮಿ ದಾಖಲೆಗಳನ್ನು ಸೃಷ್ಟಿಸಿ 39.80 ಲಕ್ಷ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ಯಾಂಕಿನ ಸಿಬ್ಬಂದಿ ತನಿಖೆ ನಡೆಸಿ ವರದಿ ಸಲ್ಲಿಸಿದ್ದಾರೆ.
ಕೆಸಿಸಿ ಸಾಲ ನೀಡುವಾಗ ಅವರು ಸಲ್ಲಿಸಿರುವ ಪಹಣಿಗಳನ್ನು ಪರಿಶೀಲಿಸದೆ ನಿರ್ಲಕ್ಷ್ಯ ಜವಾಬ್ದಾರಿ ವಹಿಸಿದ್ದಲ್ಲದೆ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಈ 19 ಜನ ಸಾಲಗಾರರ ಪಹಣಿಯನ್ನು ಪರಿಶೀಲಿಸಿದರೆ ಇವರೆಲ್ಲರೂ ಬೇರೆ ಬೇರೆ ಬ್ಯಾಂಕಿನಲ್ಲಿ ಇದೇ ಜಮೀನನ್ನು ಆಧಾರ ಮಾಡಿ ಸಾಲ ತೆಗೆದುಕೊಂಡಿದ್ದು ಆದರೂ ಅದೇ ದಾಖಲೆಗಳನ್ನು ಬೇನಾಮಿಯಾಗಿ ಸಲ್ಲಿಸಿ ಸಾಲ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು .19 ಜನ ಸಾಲಗಾರರ ಹೆಸರಿನಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ಸಾಲ ತೆಗೆದುಕೊಂಡ ಸಾಲ ನೀಡಿದ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಕ್ರಿಮಿನಲ್ ಕೇಸ್ ದಾಖಲಿಸಿ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಎಸಿಬಿ ಈ ಬಗ್ಗೆತನಿಖೆ ನಡೆಸುವಂತೆ ಆಗ್ರಹಿಸಿದರು.



