ದಾವಣಗೆರೆ: ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ (ಡಿಸಿಸಿ ಬ್ಯಾಂಕ್) ಆಡಳಿತ ಮಂಡಳಿ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ 10 ಜನರು ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ತೆಕ್ಕೆಗೆ ಆಡಳಿತ ದೊರೆತಿದೆ.
ಕಾಂಗ್ರೆಸ್ ಬೆಂಬಲಿತ ದಾವಣಗೆರೆ ‘ಎ’ ವರ್ಗ ಭಾಗ-2 ಬಿ.ಕರಿಬಸಪ್ಪ, ಹರಿಹರ ‘ಎ’ವರ್ಗ ಡಿ.ಕುಮಾರ್, ಚನ್ನಗಿರಿ ‘ಎ’ ವರ್ಗ ಭಾಗ 2 ಸಂತೋಷ ಜಿ.ಎಸ್., ಹೊನಾಳ್ಳಿ ಭಾಗ-1 ಡಿ.ಎಸ್.ಸುರೇಂದ್ರ, ಭಾಗ-2 ಡಿ.ಜೆ.ವಿಶ್ವನಾಥ್, ದಾವಣಗೆರೆ ‘ಬಿ’ ವರ್ಗದಿಂದ ಜೆ.ಆರ್.ಷಣ್ಮುಖಪ್ಪ (ಅವಿರೋಧ) ದಾವಣಗೆರೆ ‘ಸಿ’ ವರ್ಗದಿಂದ ಕೋಗುಂಡಿ ಬಕ್ಕೇಶಪ್ಪ, ದಾವಣಗೆರೆ ಜಿಲ್ಲಾ ‘ಇ’ ವರ್ಗದಿಂದ ಮುದೇಗೌಡ್ರ ಗಿರೀಶ್, ದಾವಣಗೆರೆ, ಜಗಳೂರು, ಹರಿಹರ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರತಿನಿಧಿಯಾಗಿ ಸುರೇಶ್ ಕೆಂಚಮ್ಮನಹಳ್ಳಿ, ಚನ್ನಗಿರಿ ಹೊನಾಳ್ಳಿ, ನ್ಯಾಮತಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರತಿನಿಧಿಯಾಗಿ ಎಚ್.ಕೆ.ಬಸಪ್ಪ ಕಂಚುಗಾರನಹಳ್ಳಿ ಇವರುಗಳು ಚುನಾಯಿತರಾಗಿರುತ್ತಾರೆ.
ಆಯ್ಕೆಯಾದ ಎಲ್ಲಾ ನಿರ್ದೇಶಕರನ್ನು ಹಾಗೂ ಮತ ಚಲಾಯಿಸಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧಿಕಾರ ಚುಕ್ಕಾಣಿ ಹಿಡಿಯಲು ಸಹಕರಿಸಿದ ಎಲ್ಲಾ ಸಹಕಾರಿ ಬಂಧುಗಳಿಗೆ ಹಾಗೂ ಸಹಕಾರ ಸಂಘ-ಸಂಸ್ಥೆಗಳ ಪ್ರತಿನಿಧಿಗಳಿಗೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಶಾಸಕರುಗಳಾದ ಡಾ. ಶಾಮನೂರು ಶಿವಶಂಕರಪ್ಪ, ಕೆ.ಎಸ್.ಬಸವಂತಪ್ಪ, ಡಿ.ಜಿ.ಶಾಂತನಗೌಡ, ಶಿವಗಂಗಾ ಬಸವರಾಜ್, ಜಗಳೂರು ದೇವೆಂದ್ರಪ್ಪ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಕೃತಜ್ಞತೆ ಸಲ್ಲಿಸಿದ್ದಾರೆ.



