ದಾವಣಗೆರೆ: ಅಧಿಕಾರಿಗಳು ಮೆಚ್ಚಿಸುವುದಕ್ಕಾಗಿ ಕೆಲಸ ಮಾಡದೆ, ಆತ್ಮ ಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿದಾಗ ಉತ್ತಮ ಕೆಲಸವಾಗಲು ಸಾಧ್ಯ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ಹೇಳಿದರು.
- ಜನನ-ಮರಣ ಪ್ರಮಾಣ ಪತ್ರಕ್ಕೆ ಸಾರ್ವಜನಿಕರ ಅಲೆದಾಟ ತಪ್ಪಿಸಿ
- ಘಟನೆಗಳು ಘಟಿಸಿದ 30 ದಿನಗಳ ಒಳಗಿನ ಪ್ರಮಾಣ ಪತ್ರ ತಲುಪಬೇಕು
- ಶೇ.100 ರಷ್ಟು ಜನನ, ಮರಣ ನೋಂದಣಿ ದಾಖಲಾಗಬೇಕು
- ಕಡ್ಡಾಯವಾಗಿ ಇ-ಜನ್ಮ ತಂತ್ರಾಶದಲ್ಲಿ ಜನನ, ಮರಣ ಪ್ರಮಾಣ ಪತ್ರ ಪಡೆಯಬೇಕು
ಜನನ, ಮರಣ ದಾಖಲೆಗಳನ್ನು ಪಡೆಯಲು
ಸಾಂಖ್ಯಿಕ ಇಲಾಖೆ ಹಾಗೂ ಅಪರ ಜಿಲ್ಲಾ ಜನನ, ಮರಣ ನೋಂದಾಣಾಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತದ ತುಂಗಾಭದ್ರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜನನ ಮರಣ ನೋಂದಣಿ ನಿಯಮಯಗಳು ಮತ್ತು ಇ-ಜನ್ಮ ತಂತ್ರಾಂಶದ ನಿರ್ವಹಣೆ ಕರಿತ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶೇ.100 ರಷ್ಟು ನೋಂದಣಿ:ಜನನ, ಮರಣ ದಾಖಲೆಗಳನ್ನು ಪಡೆಯಲು ಬರುವ ಜನರನ್ನು ಅಲೆದಾಡಿಸದೆ, ನಿಗದಿತ ಸಮಯದೊಳಗೆ ಜನನ, ಮರಣ ಪ್ರಮಾಣ ಪತ್ರವನ್ನು ವಿತರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿದರು. ಗ್ರಾಮೀಣ ಪ್ರದೇಶದಲ್ಲಿ ನಾಗರಿಕ ನೋಂದಣಿ ಪದ್ಧತಿಯನ್ನು ಬಲಪಡಿಸಲು ಹಾಗೂ ಶೇ.100 ರಷ್ಟು ಜನನ, ಮರಣ ನೋಂದಣಿ ಘಟನೆಗಳನ್ನು ದಾಖಲಿಸಲು ಘಟನೆಗಳು ಘಟಿಸಿದ 30 ದಿನಗಳ ಒಳಗಿನ ಘಟನೆಗಳನ್ನು ನೋಂದಾಯಿಸಲು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳನ್ನು ಜನನ, ಮರಣ ಉಪನೋಂದಣಾಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರು ತಮ್ಮ ಕುಟುಂಬದಲ್ಲಿ ಸಂಭವಿಸುವ ಜನನ ಮತ್ತು ಮರಣ ಘಟನೆಗಳ ಮಾಹಿತಿಯನ್ನು ಜಿಲ್ಲಾ ಹಾಗೂ ಗ್ರಾಮೀಣ ಜನನ, ಮರಣ ಉಪನೋಂದಣಾಧಿಕಾರಿಗಳು ಹಾಗೂ ನೋಂದಣಾಧಿಕಾರಿಗಳಿಗೆ ನೀಡಿ ಕಡ್ಡಾಯವಾಗಿ ಇ-ಜನ್ಮ ತಂತ್ರಾಶದಲ್ಲಿ ಜನನ, ಮರಣ ಪ್ರಮಾಣ ಪತ್ರಗಳನ್ನು ಪಡೆಯುವಂತೆ ತಿಳಿಸಿದರು.
ಜನನ,ಮರಣ ಘಟನೆ ನಡೆದ 1 ರಿಂದ 21 ದಿನಗಳೊಳಗೆ ಪ್ರಮಾಣ ಪತ್ರ ಲಭ್ಯವಿದ್ದು, ಘಟನೆ ಮನೆಯಲ್ಲಾಗಿದ್ದರೆ ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯತಿಯಲ್ಲಿ ಕಾರ್ಯದರ್ಶಿಗಳು , ನಗರ ಪ್ರದೇಶವಾಗಿದ್ದರೆ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತಿ ಆರೋಗ್ಯ ನಿರೀಕ್ಷಕರು. ಮತ್ತು ಸರ್ಕಾರಿ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರದಲ್ಲಾಗಿದ್ದರೆ ಸರ್ಕಾರಿ ಆಸ್ಪತ್ರೆ, ಆರೋಗ್ಯ ಕೇಂದ್ರಗಳ ನಿವಾಸಿ ವೈದ್ಯಾಧಿಕಾರಿಗಳ ಹತ್ತಿರ ಪಡೆಯಬಹುದಾಗಿದೆಂದು ತಿಳಿಸಿದರು.
30 ದಿನಗಳೊಳಗೆ ತಲುಪಿಸಿ:ಘಟನೆ ನಡೆದ 21 ರಿಂದ 30 ದಿನಗಳೊಳಗೆ ಘಟನೆಯು ಖಾಸಗಿ ಆಸ್ಪತ್ರೆಯಲ್ಲಿ ಆಗಿದ್ದರೆ ಗ್ರಾಮೀಣ ಪ್ರದೇಶದಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆಯಬೇಕು, ಗ್ರಾಮದಲ್ಲಿ ಆಗಿದ್ದರೆ ಗ್ರಾಮ ಪಂಚಾಯತಿ ಕಾರ್ಯದರ್ಶಿಗಳು. ನಗರ ಪ್ರದೇಶವಾಗಿದ್ದಲ್ಲಿ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತಿಯ ಹಾಗೂ ಆರೋಗ್ಯ ನಿರೀಕ್ಷಕರಲ್ಲಿ ಪಡೆಬಹುದಾಗಿದೆ. ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾವೀರ್ ಮಾ.ಕರೆಣ್ಣವರ್ ಮಾತನಾಡಿ ಜನನ, ಮರಣಗಳ ಅಂಕಿ ಅಂಶಗಳ ಮೂಲಕ ನೋಂದಣಿ ಆದರೆ ಕೊನೆಯ ಒಂದು ವರ್ಷದಲ್ಲಿ ಎಷ್ಟು ಜನ ಮರಣ ಆಗಿದೆ, ಎಷ್ಟು ಜನನ ಆಗಿದೆ ಎಂಬ ಅಂಕಿಅಂಶವನ್ನು ಪರಿಶೀಲಿಸಿದಾಗ ಇದರ ನಿಖರ ಮಾಹಿತಿ ದೊರೆಯುತ್ತದೆ. ಹಾಗೆಯೇ ಮುಂದಿನ ದಿನಗಳಲ್ಲಿ ಜನನ, ಮರಣ ಪ್ರಮಾಣ ಪತ್ರ ವಿತರಿಸಲು ವಿವಿಧ ಇಲಾಖೆಗಳನ್ನು ಸೇರ್ಪಡೆ ಮಾಡುವ ಗುರಿ ಇದೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆಯವರು ನಮ್ಮಲ್ಲಿ ಬಂದು ಎಷ್ಟು ಜನ ಯುವಜನ, ವಯಸ್ಕರು ಮತ್ತು ಗೃಹಣಿಯರ ಅಂಕಿ ಅಂಶಗಳನ್ನು ಸರಿಯಾದ ನೊಂದಣಿ ಪದ್ದತಿಯಿಂದ ಸಾಧ್ಯವಾಗಲಿದೆ ಎಂದರು.
ಜನಸಂಖ್ಯೆಗನುಗುಣವಾಗಿ ಸರ್ಕಾರದಿಂದ ಅನುದಾನ ಪಡೆಯಬೇಕಾದರೆ ನೊಂಣಿಯ ಅಂಕಿ ಅಂಶಗಳು ಸಹಕಾರಿಯಾಗಲಿದೆ. ಜನನ ಮರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಜನರನ್ನು ಅಲೆದಾಡಿಸದೆ, ಸೂಕ್ತ ಸಮಯದೊಳಗೆ ಜನನ ಮರಣ ಪ್ರಮಾಣ ಪತ್ರವನ್ನು ನೀಡಿದರೆ ಸಾರ್ವಜನಿಕರು ನ್ಯಾಯಾಲಯಕ್ಕೆ ಬರುವ ಸಂಖ್ಯೆ ಕಡಿಮೆಯಾಗುತ್ತದೆ. ಸಕಾಲದಲ್ಲಿ ದಾಖಲೆ ನೀಡುವುದರಿಂದ ಜನರ ಸಮಯ, ಆರ್ಥಿಕ ಸ್ಥಿತಿ ಹಾಗೂ ಜನರ ವೈಯಕ್ತಿಕ ಜೀವನಕ್ಕೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ , ಬೆಂಗಳೂರು ಜನನ ಮರಣ ವಿಭಾಗದ ಜಂಟಿ ನಿರ್ದೇಶಕರಾದ ಎಸ್.ಕೆ.ಚಿಕ್ಕಬೀರಯ್ಯ, ಜಿಲ್ಲಾ ಸಾಂಖ್ಯಿಕ ಅಧಿಕಾರಿ ನೀಲಾ .ಕೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.