ದಾವಣಗೆರೆ: ಪ್ರಸಕ್ತ ಸಾಲಿನ ದಾವಣಗೆರೆ ಜಿಲ್ಲೆಯ 6 ತಾಲ್ಲೂಕು ಮಟ್ಟದ ಮತ್ತು ಜಿಲ್ಲಾ ಮಟ್ಟದ ಮೈಸೂರು ದಸರಾ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ.
ಆಗಸ್ಟ್ 16 ರಂದು ಹರಿಹರದ ತಾಲ್ಲೂಕು ಕ್ರೀಡಾಂಗಣ ಮತ್ತು ಚನ್ನಗಿರಿ ತಾಲ್ಲೂಕು ಕ್ರೀಡಾಂಗಣ, ಆಗಸ್ಟ್ 20 ರಂದು ನ್ಯಾಮತಿ ತಾಲ್ಲೂಕು ಕ್ರೀಡಾಂಗಣ, ಆಗಸ್ಟ್ 21 ರಂದು ಹೊನ್ನಾಳಿ ತಾಲ್ಲೂಕು ಕ್ರೀಡಾಂಗಣ, ಆಗಸ್ಟ್ 25 ರಂದು ಜಗಳೂರು ಮತ್ತು ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಆನ್ ಲೈನ್ ಮೂಲಕ ನೋಂದಾಯಿಸಿ
ಅರ್ಜಿದಾರರು ನೋಂದಾಣಿಯನ್ನು ವೆಬ್‍ಸೈಟ್: https://main.d109hjbrd8psy4.amplifyapp.com/KA-sports/ ಮಾಡಿಕೊಳ್ಳಬಹುದೆಂದು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಹರ್ಷ ತಿಳಿಸಿದ್ದಾರೆ.



