ದಾವಣಗೆರೆ : ದಾವಣಗೆರೆ ನಗರವನ್ನು ಸುಂದರ ಹಾಗೂ ಸ್ವಚ್ಚ ನಗರವನ್ನಾಗಿಸಲು ಎಲ್ಲರೂ ಶ್ರಮಿಸುತ್ತಿದ್ದು, ಬಿಡಾಡಿ ಹಂದಿಗಳ ಹಾವಳಿ ಹೆಚ್ಚಾಗಿದೆ. ರಸ್ತೆಯಲ್ಲಿ ವಾಹನಗಳಿಗೆ ಅಡ್ಡಬರುವುದು ಸೇರಿದಂತೆ ರಸ್ತೆಗಳನ್ನು ಗಲೀಜು ಮಾಡುತ್ತಿದ್ದು ಇದನ್ನು ತಡೆಯಲು ಸಂಬಂಧಿಸಿದವರ ಮೇಲೆ ಸೂಕ್ತ ಹಾಗೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಭೈರತಿ ಬಸವರಾಜ ಮಹಾನಗರಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಜಿಲ್ಲಾಡಳಿತ ಭವನದ ಅಧಿಕಾರಿಗಳ ಸಭೆಯಲ್ಲಿ ಮಾತಾನಾಡಿದ ಅವರು, ಹಂದಿ ಸಾಕಾಣಿಕೆಗೆ ನಮ್ಮ ವಿರೋಧವಿಲ್ಲ. ಆದರೆ, ಸಂಬಂಧಿಸಿದ ಹಂದಿ ಮಾಲೀಕರು ಕಾಂಪೌಂಡನ್ನು ನಿರ್ಮಿಸಿಕೊಂಡು ಅಥವಾ ಹೊರ ವಲಯದಲ್ಲಿ ಹಂದಿ ಸಾಕಾಣಿಕೆ ಮಾಡಿಕೊಳ್ಳಲಿ ಎಂದರು.
ಹಂದಿಗಳ ಕಾರಣದಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದನ್ನು ಸಹಿಸಲು ಆಗುವುದಿಲ್ಲ. ಹಾಗಾಗಿ ಮಹಾನಗರಪಾಲಿಕೆಯಲ್ಲಿ ಕೂಡಲೇ ಹಂದಿ ಮಾಲೀಕರ ಸಭೆ ಕರೆದು ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಪಾಲಿಕೆ ಸ್ವಚ್ಚತೆಗೆ ಹೆಚ್ಚಿನ ಗಮನ ನೀಡಬೇಕು. ರಸ್ತೆಗಳ ಮೇಲೆ ಅಲ್ಲಲ್ಲಿ ಕಸ ಸುರಿದಿರುವುದು ಕಂಡು ಬರುತ್ತಿದ್ದು, ಅದನ್ನು ಸ್ವಚ್ಚಗೊಳಿಸುವ ಕೆಲಸ ಆಗಬೇಕು ಎಂದರು.
ವಸತಿಗೃಹ ಶೀಘ್ರ ಸಿದ್ದಪಡಿಸಿ ನೀಡಲು ಸೂಚನೆ: ಮಹಾನಗರಪಾಲಿಕೆ ವತಿಯಿಂದ ಪೌರಕಾರ್ಮಿಕರಿಗೆ ನೀಡಲು ಸಿದ್ದಗೊಳ್ಳುತ್ತಿರುವ ವಸತಿಗೃಹಗಳ ನಿರ್ಮಾಣ ಕಾರ್ಯವನ್ನು ಆದಷ್ಟು ಶೀಘ್ರವಾಗಿ ಒಂದೆರಡು ತಿಂಗಳಲ್ಲಿ ಸಂಪೂರ್ಣಗೊಳಿಸಿ ಉದ್ಘಾಟನೆ ಮಾಡಿಸಲು ಕ್ರಮ ವಹಿಸುವಂತೆ ತಿಳಿಸಿದರು.ನಗರಭಾಗದಲ್ಲಿ 24*7 ಕುಡಿಯುವ ನೀರು ಒದಗಿಸುವ ಜಲಸಿರಿ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕೆಂದು ಸೂಚಿಸಿದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಜಲಸಿರಿ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದ್ದು, 2022 ರೊಳಗೆ ಪೂರ್ಣಗೊಳಿಸುವಂತೆ ಏಜೆನ್ಸಿಯವರಿಗೆ ಗಡುವು ನೀಡಲಾಗಿದೆ ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, 2022 ರವರೆಗೆ ಕಾಯುವುದು ಬೇಡ. ಅಲ್ಲಿಯವರೆಗೆ ಜನರಿಗೆ ಕುಡಿಯುವ ನೀರು ಬೇಡವೇ? ಆದಷ್ಟು ಬೇಗ ನನ್ನ ಅವಧಿಯಲ್ಲಿಯೇ ಪೂರ್ಣಗೊಳಿಸಲು ಕ್ರಮವಹಿಸಿ ಎಂದರು.
ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ವಿತರಿಸಲು ಕೈಗೊಂಡಿರುವ ಕ್ರಮಗಳ ಕುರಿತು ಸಭೆಯಲ್ಲಿ ವಿವರಿಸಿದ ಅವರು ಜಿಲ್ಲೆಯಲ್ಲಿ 109 ಕಡೆ ಐಎಲ್‍ಆರ್ ಪಾಯಿಂಟ್‍ಗಳು ಸಿದ್ದವಿದ್ದು, ತಾಲ್ಲೂಕು ಹಂತಗಳಲ್ಲಿ ಸಭೆಗಳು ನಡೆದಿವೆ. ಇಂದೇ ಲಸಿಕೆ ಬಂದರೂ ಸಂಬಂಧಿಸಿದವರಿಗೆ ನೀಡಲು ಎಲ್ಲ ತಯಾರಿ ಆಗಿದೆ ಎಂದರು.
ಜನಸಂಪರ್ಕ ಸಭೆ : ಮುಂಬರುವ ಜನವರಿಯಿಂದ ತಾಲ್ಲೂಕು ಮಟ್ಟದಲ್ಲಿ ಜನಸಂಪರ್ಕ ಸಭೆಗಳನ್ನು ಆಯೋಜಿಸಿ, ಅರ್ಜಿದಾರರಿಂದ ಅರ್ಜಿಗಳನ್ನು ಪಡೆದು ಶೀಘ್ರವಾಗಿ ವಿಲೇವಾರಿ, ಸೌಲಭ್ಯ ಒದಗಿಸುವಂತೆ ಸೂಚನೆ ನೀಡಿದ ಅವರು ತಾವೂ ಜನಸಂಪರ್ಕ ಸಭೆಗಳಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಂತರಾಯ ಜಿ.ಪಂ. ಸಿಇಓ ಪದ್ಮಾ ಬಸವಂತಪ್ಪ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ,Éಸಿ ಮಮತಾ ಹೊಸಗೌಡರ್ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಎಸ್‍ಎಲ್‍ಓ ರೇಷ್ಮಾ ಹಾನಗಲ್, ಡಿಹೆಚ್‍ಓ ಡಾ.ನಾಗರಾಜ್, ಡಿಎಸ್‍ಓ ಡಾ.ರಾಘವನ್



