Connect with us

Dvgsuddi Kannada | online news portal | Kannada news online

ದಾವಣಗೆರೆ: ಉಪ ಮೇಯರ್ ಸೌಮ್ಯ ನರೇಂದ್ರ ಕುಮಾರ್ ಹುಟ್ಟುಹಬ್ಬ; ಕೊರೊನಾ ವಾರಿಯರ್ಸ್ ಗೆ ಸನ್ಮಾನ

ದಾವಣಗೆರೆ

ದಾವಣಗೆರೆ: ಉಪ ಮೇಯರ್ ಸೌಮ್ಯ ನರೇಂದ್ರ ಕುಮಾರ್ ಹುಟ್ಟುಹಬ್ಬ; ಕೊರೊನಾ ವಾರಿಯರ್ಸ್ ಗೆ ಸನ್ಮಾನ

 ದಾವಣಗೆರೆ : ಮಹಾನಗರ ಪಾಲಿಕೆ ಉಪ ಮೇಯರ್ ಸೌಮ್ಯನರೇಂದ್ರ ಕುಮಾರ್  ಕೊರೊನಾ ವಾರಿಯರ್ಸ್ ಸನ್ಮಾನಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡರು.

ನಾಗರಾಜು ಲೋಕಿಕೆರೆ ಅಭಿಮಾನಿ ಬಳಗ ಆಯೋಜಿಸಿದ್ದ ಕಾರ್ಯಕ್ರದಲ್ಲಿ ಸೌಮ್ಯ ನರೇಂದ್ರ ಕುಮಾರ್ ,  ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದ ಪೌರ ಕಾರ್ಮಿಕರಿಗೆ ಸನ್ಮಾನಿಸಿ  ಸಮವಸ್ತ್ರ ಮತ್ತು ಕುಕ್ಕರ್ ಉಡುಗೊರೆ ನೀಡಿದರು.

ಈ ವೇಳೆ ಮಾತನಾಡಿದ ಅವರು ಹುಟ್ಟು ಹಬ್ಬ ಆಚರಣೆ ಸಂಪ್ರದಾಯ ಮಾಡಿಕೊಂಡಿಲ್ಲ ಅಭಿಮಾನಿ ಬಳಗದಿಂದ ಆಯೋಜನೆ ಮಾಡಲಾಗಿದೆ.  ಈ ಒಂದು ದಿನ ಸಾರ್ಥಕವಾಗಬೇಕೆಂದು ಪೌರ ಕಾರ್ಮಿಕರಿಗೆ ಸನ್ಮಾನ ಮಾಡಲಾಗಿದೆ. ಕೋವಿಡ್ ಹಿನ್ನೆಲೆ ಪೌರ ಕಾರ್ಮಿಕರು ಪ್ರಾಣ ಪಣಕ್ಕಿಟ್ಟು ಹೋರಾಟ ಮಾಡುತ್ತಿದ್ದಾರೆ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ನನ್ನ  ಹುಟ್ಟುಹಬ್ಬ ಹಿನ್ನಲೆ ಅವನ್ನ ಸತ್ಕರಿಸಿದ್ದು ನನ್ನ ಭಾಗ್ಯ ಎಂದರು.

ಈ ಸಂದರ್ಭದಲ್ಲಿ ಶೋಷಿತ ವರ್ಗದ ಮುಖಂಡರಾದ ಬಾಡದ ಆನಂದರಾಜು , ಪಾಲಿಕೆ ಸದಸ್ಯರಾದ ಗೌರಮ್ಮ ಗಿರೀಶ್, ಜಯಮ್ಮ ಗೋಪಿನಾಯ್ಕ್, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ದಿಳ್ಳೆಪ್ಪ,   ರೇಖಾ ಸುರೇಶ್ , ಮಂಜುನಾಯ್ಕ್, ಲೋಕಿಕೆರೆ ಮಂಜುನಾಥ್, ಮೋಹಿದ್ದೀನ್ ಉಪಸ್ಥಿತರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top