ದಾವಣಗೆರೆ: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ (ದೂಡಾ) ಹಳೇ ಕುಂದವಾಡ ಬಳಿ ಜಮೀನು ಲೇಔಟ್ ನಿರ್ಮಿಸಲು ಯೋಜೆನ ರೂಪಿಸಲಾಗಿದ್ದು, ಇಂದು ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಸೇರಿದಂತೆ ಅಧಿಕಾರಿಗಳು ರೈತರ ಜಮೀನು ಪರಿಸೀಲಿಸಿದರು.
ದಾವಣಗೆರೆ ನಗರದ ಹೊರ ವಲದ ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲಿರುವ ಕುಂದವಾಡದಲ್ಲಿ ಜಮೀನು ಪರಿಶೀಲನೆ ನಡೆಸಲಾಯಿತು. ರೈತರು, ಅಧಿಕಾರಿಗಳೊಂದಿಗೆ ದೂಡಾ ಅಧ್ಯಕ್ಷರು ಸಮಾಲೋಚನೆ ನಡೆಸಿದರು. ಅತಿ ಶೀಘ್ರದಲ್ಲಿಯೇ ಲೇಔಟ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.