ದಾವಣಗೆರೆ: ತಾಲ್ಲೂಕಿನ ಅತ್ತಿಗೆರೆ ಗ್ರಾಮದಲ್ಲಿರುವ ಶ್ರೀ ಅರವಿಂದ ವಿದ್ಯಾ ಸಂಸ್ಥೆಯ ಎಸ್ ಸಿ ಎಸ್ ಜಿ ಪದವಿ ಪೂರ್ವ ಕಾಲೇಜಿನಲ್ಲಿ ಉಚಿತ ಪಿಯುಸಿ ನೇರ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ವಿದ್ಯಾಸಂಸ್ಥೆಯ ಅಧ್ಯಕ್ಷ ಪ್ರೊ.ಹೆಚ್ .ಚನ್ನಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಸ್ಥೆಯು 24 ವರ್ಷಗಳಿಂದ ಅತ್ತಿಗೆರೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಳೆದ 4 ವರ್ಷದಿಂದ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಪುಸ್ತಕ ಹಾಗೂ ಕಾಲೇಜು ಶುಲ್ಕವನ್ನು ಸಂಸ್ಥೆಯೇ ಭರಿಸಲಿದೆ.ಇದರೊಂದಿಗೆ ಎಸ್.ಎಸ್.ಎಲ್.ಸಿ. ಪಾಸ್, ಐ.ಟಿ.ಐ, ಡಿಪ್ಲೋಮ, ಜೆ.ಓ.ಸಿ, ಪಾಸ್ ಫೇಲ್ ಹಾಗೂ ಪಿಯುಸಿ ಓದಿ ಅರ್ಧಕ್ಕೆ ನಿಲ್ಲಿಸಿದವರು, ಫೇಲ್ ಆದವರಿಗೆ ನೇರವಾಗಿ ಪಿಯುಸಿ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಪಿಯುಸಿಯ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್ ಸೇರಿ ಭಾಷಾ ವಿಷಯಗಳ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ. ಎಸ್.ಎಸ್.ಎಲ್.ಸಿ ಪಾಸಾಗಿ ಇದುವರೆಗೂ ಪಿ.ಯು.ಸಿ ದಾಖಲಾಗದೇ ಇರುವವರು 17 ವರ್ಷ ತುಂಬಿದವರಿಗೆ ಐ.ಟಿ.ಐ. ಡಿಪ್ಲೋಮ, ಜೆ.ಓ.ಸಿ. ಪಿ.ಯು.ಸಿ ಅರ್ಧಕ್ಕೆ ನಿಲ್ಲಿಸಿದವರು ಅಥವಾ ಫೇಲಾದವರಿಗೆ ಪ್ರವೇಶ ಪಡೆಯಲು ಅವಕಾಶ ಇದೆ. ಈ ಪರೀಕ್ಷೆ ತೆಗೆದುಕೊಳ್ಳಲು ಆಸಕ್ತ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ಮೂಲ ಅಂಕಪಟ್ಟಿ, ವರ್ಗಾವಣೆ ಪ್ರಮಾಣ ಪತ್ರ ಆಧಾರ್ ಕಾರ್ಡ್ ಇತ್ತೀಚಿನ ಪಾಸ್‌ಪೋರ್ಟ್ ಭಾವಚಿತ್ರಗಳೊಂದಿಗೆ ಶ್ರೀ ಅರವಿಂದ ವಿದ್ಯಾಸಂಸ್ಥೆ (ರಿ.) ದಾವಣಗೆರೆ 51. ಚೇತನ ಹೋಟೆಲ್ ರಸ್ತೆ, ಕೆ.ಇ.ಬಿ. ಕ್ವಾರ್ಟಸ್ ಎದುರು, ಪಿ.ಜೆ.ಬಡಾವಣೆ, ದಾವಣಗೆರೆ. ಅಥವಾ ಪ್ರಾಂಶುಪಾಲರು, ಎಸ್.ಸಿ.ಎಸ್.ಜಿ. ಪದವಿ ಪೂರ್ವ ಕಾಲೇಜು, ಅತ್ತಿಗೆರೆ, ಮೊ. 9480766296 , 9845899777 ಗೆ ಸಂಪರ್ಕಿಸಬಹುದು.
ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಪದವಿ ಶಿಕ್ಷಣ ಮುಂದುವರಿಸಲು, ಸರ್ಕಾರಿ ನೌಕರಿಯಲ್ಲಿ ಬಡ್ತಿ ಪಡೆಯಲು ಅನುಕಂಪದ ನೌಕರಿ ಪಡೆಯಲು ಆರ್ಹತೆ ಹೊಂದಿರುತ್ತಾರೆ ಎಂದರು.ಈ ಸಂದರ್ಭದಲ್ಲಿ ಪ್ರೊ.ಕೆ.ಆರ್ ಸಿದ್ದಪ್ಪ,,ಡಾ.ಮಂಜಪ್ಪ,ಹೆಚ್.ಚಂದ್ರಪ್ಪ ಉಪಸ್ಥಿತರಿದ್ದರು.



