ದಾವಣಗೆರೆ: ಶಾಸಕ ಎಸ್.ವಿ. ರಾಮಚಂದ್ರ ಅವರನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ನೇಮಕ ಮಾಡಿದ್ದಕ್ಕೆ ವಿರೋಧ ವ್ಯಕ್ತವಾಗಿದೆ.
ಶಿವಕುಮಾರಸ್ವಾಮಿ ಕ್ರೆಡಿಟ್ ಸೊಸೈಟಿಯ ನಿರ್ದೇಶಕ ಕುಂದೂರು ರಾಜಣ್ಣ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿ.ವಿ. ಚಂದ್ರಶೇಖರ್ ಅವರ ನಿಧನದಿಂದಾಗಿ ನಿರ್ದೇಶಕರ ಸ್ಥಾನ ಖಾಲಿಯಾಗಿತ್ತು. ಈ ಸ್ಥಾನಕ್ಕೆ ಕೆ.ಬಿ. ಶಂಕರನಾರಾಯಣ, ವೈ.ಮಲ್ಲೇಶ್ , ಜೆ. ಸೋಮನಾಥ್, ತಿಮ್ಮಣ್ಣ ಸೇರಿದಂತೆ ಅನೇಕ ಹಿರಿಯ ಮುಖಂಡರಿದ್ದರು. ಹಿರಿಯರೆಲ್ಲರನ್ನು ಕಡೆಗಣಿಸಿ ಶಾಸಕರನ್ನು ನೇಮಕ ಮಾಡಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.
ಜಗಳೂರು ಮೀಸಲು ಕೇತ್ರದಿಂದ ಆಯ್ಕೆಯಾದ ಶಾಸಕರು ರಾಮಚಂದ್ರ ಅವರು, ಈಗಾಗಲೇ ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹುದ್ದೆಯಲ್ಲಿದ್ದಾರೆ. ಇದರ ಜತೆಗೆ ಈಗ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬಿಜೆಪಿ ರಾಷ್ಟ್ರ, ರಾಜ್ಯ ನಾಯಕರಿಗೆ ದೂರು ನೀಡಲಾಗುವುದು ಎಂದರು.