ದಾವಣಗೆರೆ: ದಲಿತರು, ಹಿಂದುಳಿದವರನ್ನು ಕಾಂಗ್ರೆಸ್ ಪಕ್ಷದಲ್ಲಿ ದುಡಿಸಿಕೊಂಡು ಅಧಿಕಾರ ನೀಡದೆ ವಂಚನೆ ಮಾಡಿದೆ. ಇದರ ಶಾಪ ಕಾಂಗ್ರೆಸ್ ಪಕ್ಷಕ್ಕೆ ತಟ್ಟಿದ್ದು, ಹೀನಾಯ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜು ಹೇಳಿದ್ದಾರೆ.
ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಉಪ್ಪಾರ ಸಮಾಜದ ಹಿರಿಯ ಮುಖಂಡ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎವೈ.ಪ್ರಕಾಶ್ ಅವರನ್ನು ಸನ್ಮಾನಿಸಿ ಮಾತನಾಡಿದರು. ದಶಕಗಳ ಹಿಂದೆ ದಲಿತರು, ಹಿಂದುಳಿದವರು ಕಾಂಗ್ರೆಸ್ ಪಕ್ಷವನ್ನು ದೇವರ ಸ್ಥಾನದಲ್ಲಿಟ್ಟಿದ್ದರು. ಕಾಂಗ್ರೆಸ್ ಪಕ್ಷ ಕೇವಲ ಮತಕ್ಕಾಗಿ ದಲಿತರು, ಹಿಂದುಳಿದವರನ್ನ ಬಳಿಸಿಕೊಳ್ಳುತಿತ್ತು. ಹೀಗಾಗಿ ಇಂದು ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದಕೊಂಡಿದೆ. ಇಂದು ಬಿಜೆಪಿ ಪಕ್ಷ ಹಿಂದುಳಿದವರು, ದಲಿತರಿಗೂ ಸಹ ಅಧಿಕಾರ ನೀಡಿ ಸಮಾನತೆ ಸಾರಿದೆ ಎಂದರು.
ಇದಕ್ಕೆ ಜಿಲ್ಲೆಯ ಹಲವು ಹಿಂದುಳಿದ ಹಾಗೂ ದಲಿತ ನಾಯಕರಿಗೆ ಅಧಿಕಾರ ನೀಡಿರುವುದೇ ಇದಕ್ಕೆ ಸಾಕ್ಷಿ. ಧೂಡ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಇಂದಿನ ಅಧ್ಯಕ್ಷರಾದ ಪ್ರಕಾಶ್ ಸೇರಿದಂತೆ ಹಲವು ಹಿಂದುಳಿದ ನಾಯಕರಿಗೆ ಅಧಿಕಾರ ನೀಡಿರುವುದಲ್ಲದೇ ದಲಿತ ಮಹಿಳೆ ಜಯಮ್ಮ ಗೋಪಿನಾಯ್ಕ್ ರವರಿಗೆಮಹಾಪೌರ ಸ್ಥಾನ ನೀಡಿದ್ದು. ಇದರ ಫಲವಾಗಿಯೇ ಬಿಜೆಪಿಯತ್ತಾ ಹಿಂದುಳಿದ, ದಲಿತ ಸೇರಿದಂತೆ ಹಲವಾರು ಸಮಾಜದವರು ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂದರು.
ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ಘನತೆಯನ್ನ ಎತ್ತಿ ಹಿಡಿದಿದ್ದು ಬಿಜೆಪಿ. ಇನ್ನೂ ಬುಡಕಟ್ಟು ಜನಾಂಗದ ಮಹಿಳೆಗೆ ರಾಷ್ಟಪತಿ ಹುದ್ದೆ ನೀಡಿದೆ, ಇಂಥ ಎಷ್ಟು ದಲಿತ ಹಿಂದುಳಿದವರಿಗೆ ಅಧಿಕಾರ ನೀಡುವ ಮೂಲಕ ಎಲ್ಲಾ ಜಾತಿಗೂ ಸಮಾನತೆ ಸಾರವನ್ನ ಬಿತ್ತಿದೆ. ಇನ್ನೂ ಜಿಲ್ಲೆಯಲ್ಲಿ ಸರ್ವ ಸಮಾಜದವರ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಜೋಡಿ ಎತ್ತುಗಳಾದ ಸಂಸದರಾದ ಸಿದ್ದೇಶ್ವರ್ ಹಾಗೂ ಶಾಸಕರಾದ ರವೀಂದ್ರನಾಥ್ ಅವರು ಜಿಲ್ಲೆಯ ದಲಿತ ಹಿಂದುಳಿದವರನ್ನ ಗುರುತಿಸಿ ಸರ್ಕಾರದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಹಾಗೂ ಹಲವು ಹುದ್ದೆಗಳನ್ನ ದಲಿತ ಹಿಂದುಳಿದವರಿಗೆ ನೀಡಿ ಸಮಾನತೆ ಎತ್ತಿ ಹಿಡಿದಿದ್ದಾರೆ. ಕಾಂಗ್ರೆಸ್ಸಿನ ಮಾಜಿ ಸಿಎಂ ಸಿದ್ದರಾಮಯ್ಯ ಕೇವಲ ಹೆಸರಿಗಷ್ಟೇ ಅಹಿಂದ ನಾಯಕ ಅವರ ಅಧಿಕಾರದ ಅವಧಿಯಲ್ಲಿ ಎಷ್ಟು ಜನ ದಲಿತರಿಗೆ, ಹಿಂದುಳಿದವರಿಗೆ ಅಧಿಕಾರ ನೀಡಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷ ದಲಿತರು ಹಿಂದುಳಿದವರನ್ನ ಕೇವಲ ಓಟ್ ಬ್ಯಾಂಕಿಂಗ್ ಮಾಡಿಕೊಂಡಿದೆ ವಿನಃ ಅಧಿಕಾರ ನೀಡಿ ಸಮಾನತೆ ಸಾರಲಿಲ್ಲ. ಹೀಗಾಗಿಯೇ ಅವರಿಗೆ ಶಾಪ ತಟ್ಟಿದೆ ಎಂದು ಬಾಡದ ಆನಂದರಾಜು ಅವರು ತಿಳಿಸಿದರು. ಕಾಂಗ್ರೆಸ್ ಪಕ್ಷ ದಲಿತರು ಹಿಂದುಳಿದವರನ್ನ ಕಡೆಗಣಿಸಿದ್ದು ಇಂದು ಅಧಿಕಾರ ಕಳೆದುಕೊಳ್ಳಲು ಕಾರಣವಾಗಿದೆ. ಬಿಜೆಪಿ ಪಕ್ಷ ಎಲ್ಲರಿಗೂ ಅಧಿಕಾರ ಹಂಚಿಕೆ ಮಾಡಿ ಅಧಿಕಾರ ಮಾಡುತ್ತಿದೆ. ಈ ದೇಶ, ರಾಜ್ಯ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ, ಸಂಸದ ಜಿ.ಎಂ ಸಿದ್ದೇಶ್ವರ, ಶಾಸಕ ರವೀಂದ್ರನಾಥ್ ಅವರ ನೇತೃತ್ವದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದನ್ನ ಸೂರ್ಯ ಚಂದ್ರ ಎಷ್ಟು ಸತ್ಯವೂ ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೇ ಇದನ್ನ ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ಮಹಾಪೌರ ಎಸ್.ಟಿ.ವಿರೇಶ್, ಬಿಜೆಪಿ ಹಿರಿಯ ದಲಿತ ಮುಖಂಡ ಆಲೂರು ನಿಂಗರಾಜ್, ಪಾಲಿಕೆ ಸದಸ್ಯರಾದ ಮಂಜುನಾಯ್ಕ್, ಸಿ.ವಿ.ನರೇಂದ್ರಕುಮಾರ್, ಶ್ಯಾಮನೂರು ಗಿರೀಶ್, ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಪಾಟೇಲ್, ಟಿಂಕರ್ ಮಂಜಣ್ಣ, ಅಂಗವಿಕಲ ಸಂಘದ ಜಿಲ್ಲಾಧ್ಯಕ್ಷ ಧನಂಜಯ ಕುಮಾರ್ ಮತ್ತಿತರರು ಇದ್ದರು.